Monday, April 6, 2026
Homeಕ್ರೈಮ್ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಪತ್ರ ಸಮರ ಅಭಿಯಾನ

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಪತ್ರ ಸಮರ ಅಭಿಯಾನ

ಸಕಲೇಶಪುರ : ಐತಿಹಾಸಿಕ ದೇವಸ್ಥಾನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುತಿದ್ದ ಛಾಯಾಗ್ರಾಹಕ ಅಸಭ್ಯ ಹಾಗೂ ದುರಹಂಕಾರದ ವರ್ತನೆ ಮತ್ತು ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಸ್ಥಳೀಯ ಭಕ್ತರ ಮೇಲೆ ದಬ್ಬಾಳಿಕೆ ಮಾಡಿದ ಘಟನೆ ಖಂಡಿಸಿ ಅಲ್ಲಿನ ಸ್ಥಳೀಯರು ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಪತ್ರ ಸಮರ ಅಭಿಯಾನ ಶುರು ಮಾಡಿದ್ದಾರೆ.

ಹೌದು .. ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುತಿದ್ದ ಛಾಯಾಗ್ರಾಹಕ ಅಸಭ್ಯ ಹಾಗೂ ದುರಹಂಕಾರದ ವರ್ತನೆ ಮತ್ತು ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಸ್ಥಳೀಯ ಭಕ್ತರ ಮೇಲೆ ದಬ್ಬಾಳಿಕೆ ಮಾಡಿದ್ದು ನಂತರ ಸಾಮಾಜಿಕ ಜಾಲತಾಣದಲ್ಲಿ ಸ್ಥಾನೀಯರದ್ದೇ ತಪ್ಪು ಎಂದು ಬಿಂಬಿಸಿ ಅಮಾಯಕರು ಜೈಲು ಪಾಲಾಗುವಂತೆ ಮಾಡಿದ್ದೂ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಇದರ ನಡುವೆಯೂ ಹಾಸನ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಬಂದು ಗ್ರಾಮಸ್ಥರ ಹೇಳಿಕೆ ಪಡೆದು ನಿರ್ಧಾರ ಮಾಡುತ್ತೇನೆ ಎಂದು ಹೇಳಿ ಇತಿಹಾಸ ಪ್ರಸಿದ್ಧ ಮತ್ತು ತನ್ನದೇ ಪಾರಂಪರಿಕ ಹಿನ್ನಲೆ ಹೊಂದಿರುವ ಹೊಯ್ಸಳರ ಕಾಲದಲ್ಲಿ ಜೀರ್ಣೋದ್ದಾರವಾಗಿ ಪಾಂಡವರ ಕಾಲದ್ದು ಎಂಬ ಕುರುಹುಗಳಿದ್ದರು ಸಹ ಜಿಲ್ಲಾಧಿಕಾರಿಗಳು ಯಾವುದೇ ಮನ್ನಣೆ ನೀಡದೆ ಚಿತ್ರೀಕರಣಕ್ಕೆ ಹಣ ಪಾವತಿಸಿದರೆ ಅನುಮತಿ ನೀಡಬಹುದು ಎಂಬ ನಿರ್ಧಾರ ಮಾಡಿರುವುದು ಖಂಡನೀಯ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಹಾನಬಾಳು ಅಧ್ಯಕ್ಷ ರತನ್ ಮರಗುಂದ ಖಂಡಿಸಿದ್ದಾರೆ

ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿ ಚಿತ್ರೀಕರಣಕ್ಕೆ 4 ಗಂಟೆ ಚಿತ್ರಿಸಲು 5000 ಹಣ ನಿಗದಿ ಮಾಡಿರೋದು ಗ್ರಾಮಸ್ಥರು ಮತ್ತು ಮನೆ ದೇವರಾಗಿ ಪೂಜಿಸುವವರ ಭಾವನೆಗೆ ಮನ್ನಣೆ ನೀಡಿಲ್ಲ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರು ಮತ್ತು ಬೆಟ್ಟದ ಭೈರವೆಶ್ವರನ್ನ ಮನೆದೇವರಾಗಿ ಪೂಜೆ ಮಾಡುವ ಕುಟುಂಬ ಹಾಗೂ ಸಾಮಾನ್ಯ ಭಕ್ತರಿಂದ ʼʼನಾನು ಬೆಟ್ಟದ ಭೈರವೆಶ್ವರ ದೇವರ ಭಕ್ತ ನನ್ನ ಭಾವನೆಗೆ ಧಕ್ಕೆ ತರಬೇಡಿ ನನ್ನ ಶ್ರದ್ದೆ, ನನ್ನ ಭಕ್ತಿ ನಮ್ಮ ಅಸ್ಮಿತೆ ಬೆಟ್ಟದ ಭೈರವೆಶ್ವರ ಆದ್ದರಿಂದ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಮತ್ತು ಫೋಟೋ ಶೂಟ್ ಮಾಡಲು ಅವಕಾಶ ನೀಡಬಾರದುʼʼ ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಾವಿರಾರು ಜನ ಭಕ್ತರಿಂದ ಪತ್ರ ರವಾನೆಯಾಗುತ್ತದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಶೇಖರ್ ಕಬ್ಬಿನಗದ್ದೆ ತಿಳಿಸಿದ್ದಾರೆ.

ಮುಂದಿನ ಪೀಳಿಗೆಗೂ ದೇವಸ್ಥಾನ ಸಂರಕ್ಷಣೆ ಆಗಬೇಕು ಎಂಬ ಉದ್ದೇಶದಿಂದ ಪತ್ರ ಅಭಿಯಾನ ಮಾಡುತ್ತಿರುವುದಾಗಿ ಸಂಘಟನೆ ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ತಿಳಿಸಿದೆ

ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಾದ ದೀಪಕ್, ಮಹೇಶ್, ಬೈಕೆರೆ ಬಸವರಾಜು, ಗಣೇಶ್, ಮುಖಂಡರಾದ ದುಷ್ಯಂತ್ ಉಪಸ್ಥಿತಿ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!