ಚಿಕ್ಕಮಗಳೂರು: ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಹೌದು .. ಐ.ಜಿ.ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಸಿಬ್ಬಂದಿ ನಾರಾಯಣಸ್ವಾಮಿ ಪ್ರಶಾಂತ್, , ಲಾವಣ್ಯ, ಶ್ವೇತಾ ವಿರುದ್ಧ ವಂಚನೆ ಎಸಗಿದ ಆರೋಪ ಕೇಳಿ ಬಂದಿದೆ. 2020ರಿಂದ 2025ರ ಅವಧಿಯಲ್ಲಿ ಈ ಹಗರಣ ನಡೆದಿದೆ ಎನ್ನಲಾಗಿದ್ದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳು ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನವನ್ನು ಮಾರಿ ಆ ಜಾಗದಲ್ಲಿ ನಕಲಿ ಚಿನ್ನವನ್ನು ಇಟ್ಟಿರುವ ಆತಂಕಕಾರಿ ಆರೋಪಗಳು ಕೇಳಿಬಂದಿವೆ. 80 ಗ್ರಾಂನಿಂದ ಹಿಡಿದು 140 ಗ್ರಾಂವರೆಗೂ ಚಿನ್ನವಿಟ್ಟು ಸಾಲ ಪಡೆದಿದ್ದ ಹಲವು ಗ್ರಾಹಕರು ಈಗ ಸಾಲ ಮರುಪಾವತಿ ಮಾಡಿದರೂ ತಮ್ಮ ಚಿನ್ನ ವಾಪಸ್ ಸಿಗುತ್ತಿಲ್ಲ ಇದೀಗ ಕಣ್ಣೀರು ಹಾಕ್ತಿದ್ದಾರೆ. ಅಷ್ಟೇ ಅಲ್ಲದೇ ಗ್ರಾಹಕರ ಎಫ್.ಡಿ ಹಣವನ್ನೂ ಸಹ ಲೂಟಿ ಮಾಡಿದ್ದಾರೆ ಎನ್ನಲಾಗಿದ್ದು, ಕಂಗಾಲಾದ ಗ್ರಾಹಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ
