ಮೂಡಿಗೆರೆ: ಉಪಸಭಾಪತಿ ಎಂ ಕೆ ಪ್ರಾಣೇಶ ರವರ ಎಂ ಎಲ್ ಸಿ ಸದಸ್ಯತ್ವವನ್ನು ಯಾವ ಕೋರ್ಟ್ ಇದುವರೆಗೆ ರದ್ದುಪಡಿಸಿಲ್ಲ. ಪದೆ ಪದೆ ವಿಜಯೋತ್ಸವ ಅಚರಿಸುತ್ತಿರುವ ಕಾಂಗ್ರೆಸಿಗರಿಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಘು ಜನ್ನಾಪುರ ತಿಳಿಸಿದ್ದಾರೆ.
ಅವರು ಹೇಳಿಕೆಯಲ್ಲಿ ತಿಳಿಸಿ, ವಿಧಾನಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ರವರ ಸದಸ್ಯತ್ವ ಸುಪ್ರೀಂ ಕೋರ್ಟ್ ಆದೇಶದಂತೆ ರದ್ದಾಗಿದೆ ಎಂದು ಕಾಂಗ್ರೆಸ್ಸಿಗರು ಕಳೆದ ಎರಡು ವರ್ಷಗಳಿಂದ ಪಟಾಕಿ ಹೊಡೆಯುವುದು ಮಾಧ್ಯಮಗಳ ಮುಂದೆ ಸುಳ್ಳು ಸುದ್ದಿ ಹರಡುವುದನ್ನು ಮಾಡುತ್ತಿದ್ದು ಇದನ್ನ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಪ್ರಕಟಸುತ್ತಿವೆ.
ಆದರೆ ಸುಪ್ರೀಂಕೋರ್ಟ್ ನಾಮಿನಿ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ ಎಂಬ ಈ ಹಿಂದಿನ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆಯ ಹೊರತು ಸದಸ್ಯತ್ವವನ್ನು ರದ್ದುಗೊಳಿಸಿರುವುದಿಲ್ಲ.
ಈಗಾಗಲೇ ಚುನಾವಣಾ ಆಯೋಗ ತನ್ನ ಪ್ರಕ್ರಿಯೆ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟಿಗೆ ಕಳುಹಿಸಿಕೊಟ್ಟಿದ್ದು. ಇದೇ ಲಕೋಟೆಯನ್ನು ಮುಚ್ಚಿದ ರೀತಿಯಲ್ಲಿ ಹೈಕೋರ್ಟಿಗೆ ಸುಪ್ರೀಂಕೋರ್ಟ್ ವಾಪಸ್ ಕಳುಹಿಸಿದ್ದು. ಹೈಕೋರ್ಟಿನಲ್ಲಿ ಸದಸ್ಯತ್ವ ರದ್ದತಿಯ ಬಗ್ಗೆ ತೀರ್ಮಾನಿಸಬೇಕು ಎಂದು ಸೂಚಿಸಿದೆ. ಕಾನೂನು ಪ್ರಕ್ರಿಯೆಗಳು ಇನ್ನು ಹಲವು ದಿನಗಳು ತಿಂಗಳುಗಳ ಕಾಲ ಮುಂದುವರೆಯಲಿದೆ.
ಅಷ್ಟಕ್ಕು ನಾಮಿನಿ ಸದಸ್ಯರ ಮತದಾನದ ಹಕ್ಕನ್ನು 1987 ರಲ್ಲಿಯೆ ಕಾಂಗ್ರೆಸ್ ಸರಕಾರವೆ ಅದೇಶಿಸಿದ್ದು ಚುನಾವಣ ಆಯೋಗ ಇದನ್ನ ದೇಶಾದಾದ್ಯಂತ ಅಂದೆ ಜಾರಿಗೆ ತಂದಿದ್ದು. ಸಾವಿರಾರು ಸದಸ್ಯರು ಇದರ ಪ್ರಯೋಜನ ಪಡೆದಿದ್ದು. ಈಗಲು ಸದಸ್ಯರಾಗಿ ಮುಂದುವರೆದಿದ್ದಾರೆ. ಈ ಹಿಂದೆ ಗಾಯಿತ್ರಿಯವರು ಗೆದ್ದಾಗ ಈ ನಾಮಿನಿ ಮತಗಳು ಗೆಲುವಿಗೆ ಸಹಕರಿಸಿದ್ದವು ಸೋತಾಗ ಮಾತ್ರ ಈ ಮತಗಳು ಇವರಿಗೆ ಕಹಿಯಾಗಿದೆ ಎಂದರು. ಚುನಾವಣೆಯಲ್ಲಿ ಪ್ರಾಣೇಶ್ ಮಾತ್ರ ಈ ಮತ ಹಾಕಿಸಿಕೊಂಡು ಮೋಸ ಮಾಡಿ ಗೆದ್ದಿದ್ದಾರೆ. ಎಂಬಂತೆ ಕೆಲ ಅನಕ್ಷರಸ್ಥರು ಬೆಂಬಲಿಸಲು ಹೊರಟಿದ್ದು. ನಿಮ್ಮ ಅಧಿಕಾರದ ಮದದ ಅವದಿ ಕೆಲವೇ ತಿಂಗಳುಗಳಿದ್ದು ಸುಳ್ಳು ಹೇಳುವಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್ಸಿಗೆ ಜನರು ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ತಿಳಿಸಿದರು.
