ಹಾಸನಾಂಬೆ ದರ್ಶನಕ್ಕೆಂದು ಬರುವಾಗ ತಮ್ಮ ಕಾರನ್ನು ತಡೆದ ಅಧಿಕಾರಿಗಳ ವಿರುದ್ಧ ಶಾಸಕ ಹೆಚ್.ಡಿ.ರೇವಣ್ಣ ಗರಂ ಆಗಿದ್ದರು.
ತಮ್ಮ ಭದ್ರತಾ ವ್ಯವಸ್ಥೆಯೊಂದಿಗೆ ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಹೀಗಾಗಿ ಅವರ ಕಾರನ್ನು ಕಂದಾಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಗರಂ ಆದ ಶಾಸಕರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ದರ್ಶನಕ್ಕೆ ತೆರಳಿದ್ದಾರೆ.
ಪತ್ನಿ ಭವಾನಿ ರೇವಣ್ಣ ಜೊತೆ ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು.
