Wednesday, March 25, 2026
Homeಜಿಲ್ಲಾಸುದ್ದಿಶಂಕರಕುಡಿಗೆ-ಬಸರೀಕಟ್ಟೆ ರಸ್ತೆಗೆ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದ ಶಾಸಕಿ ನಯನಾ ಮೋಟಮ್ಮ

ಶಂಕರಕುಡಿಗೆ-ಬಸರೀಕಟ್ಟೆ ರಸ್ತೆಗೆ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದ ಶಾಸಕಿ ನಯನಾ ಮೋಟಮ್ಮ

ಕಳಸ ತಾಲೂಕಿನ ಶಂಕರಕುಡಿಗೆಯಿಂದ ಬಸರೀಕಟ್ಟೆ ಹೋಗುವ ರಸ್ತೆ ಬಹಳ ವರ್ಷಗಳಿಂದ ಹದಗೆಟ್ಟು ಹೋಗಿದ್ದು ವಾಹನಗಳು ತಿರುಗಾಡದ ಪರಿಸ್ಥಿತಿ ಎದುರಾಗಿ ಗ್ರಾಮಸ್ಥರು ಕೂಡ ರಸ್ತೆ ಸರಿ ಪಡಿಸುವಂತೆ ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕಿ ನಯನಾ ಮೋಟಮ್ಮ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಕಾಂಕ್ರೀಟ್ ರಸ್ತೆ ಮಾಡಲು ಗುದ್ದಲಿ ಪೂಜೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗ್ರಾಮಸ್ಥರ ಕಷ್ಟ ಅರ್ಥವಾಗುತ್ತದೆ ಹಾಗಾಗಿ ಇಂದು ಗುದ್ದಲಿಪೂಜೆ ಮಾಡಿದ್ದೇನೆ ಸದ್ಯ ಈಗ 400 ಮೀಟರ್ ರಸ್ತೆ ಮಾಡಲಾಗುವುದು ಮುಂದೆ ಹೆಚ್ಚಿನ ಅನುದಾನ ಇರಿಸಿ ಸಂಪೂರ್ಣ ರಸ್ತೆ ಮಾಡಿಸುವುದಾಗಿ ಭರವಸೆಯನ್ನು ನೀಡಿದರು.

ಇದೇ ವೇಳೆ ಗ್ರಾಮಸ್ಥರರಾದ ಮಂಜುನಾಥ್ ಮಾತನಾಡಿ ನಮ್ಮ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿ ನಮ್ಮೂರಿಗೆ ಬಾಡಿಗೆ ವಾಹನಗಳು ಬರದೆ ಇರುವ ಪರಿಸ್ಥಿತಿ ಬಹಳಷ್ಟು ಭಾರೀ ಎದುರಾಗಿತ್ತು ಆಗ ನಾವು ಗ್ರಾಮಸ್ಥರೆಲ್ಲ ಸೇರಿ ಗುಂಡಿಗಳನ್ನು ಮುಚ್ಚಿದ್ದೆವು.


ಶಾಸಕರಿಗೆ ರಸ್ತೆ ಸರಿಪಡಿಸಿ ಕೊಡುವಂತೆ ಮನವಿ ಮಾಡಿದ್ದೆವು ನಮ್ಮ ಶಾಸಕರು ನಮ್ಮ ಮನವಿಗೆ ಸ್ಪಂದಿಸಿದಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆ ತಿಳಿಸುತ್ತೇವೆ.ಶಾಸಕರು ಮುಂದಿನ ದಿನಗಳಲ್ಲಿ ಸಂಪೂರ್ಣ ರಸ್ತೆ ಮಾಡುವುದಾಗಿ ತಿಳಿಸಿದ್ದಾರೆ ನಮಗೂ ಅವರ ಮೇಲೆ ನಂಬಿಕೆ ಇದೆ ಎಂದರು.

ಈ ಸಂಧರ್ಭದಲ್ಲಿ ತೋಟದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕಡೆಕುಡಿಗೆ ಸುಧಾಕರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜೇಂದ್ರ ಪ್ರಸಾದ್, ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!