Sunday, July 12, 2026
Homeಜಿಲ್ಲಾಸುದ್ದಿಮೂಡಿಗೆರೆ: ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಾನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಇಂಪಾ...

ಮೂಡಿಗೆರೆ: ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಾನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಇಂಪಾ ಸವೀನ್!

Telegram Group
Join Now

ಮೂಡಿಗೆರೆ: ತಾಲೂಕಿನ ಬಣಕಲ್ ಹೋಬಳಿಯ ಬಾನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಇಂಪಾ ಸವೀನ್ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಹೌದು .. ಕರ್ನಾಟಕ ಜ್ಞಾನ – ವಿಜ್ಞಾನ ಸಮಿತಿಯು ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್ )ಅಧಿಕಾರಿ ಅನಿತಾ ಕೌಲ್ ಅವರ ನೆನಪಾರ್ಥ ನೀಡುವ ಅತ್ಯುತ್ತಮ ಶಿಕ್ಷಕಿ/ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ಜಜಿಲ್ಲೆಯ ಮೂವರಿಗೆ ಲಭಿಸುತ್ತದೆ ಈ ಬಾರೀ ಮೂಡಿಗೆರೆ ತಾಲೂಕಿನ ಬಾನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಇಂಪಾ ಸವೀನ್ ಅವರ ಮುಡಿಗೇರಿದೆ.

ಶ್ರೀಮತಿ ಇಂಪಾ ಸವೀನ್ ಅವರು, ಬಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸುಮಾರು 19 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾಗೆ ಗ್ರಾಮದಲ್ಲಿ ಸರಳತೆ, ಪ್ರೀತಿ, ವಾತ್ಸಲ್ಯದೊಂದಿಗೆ ವರ್ತಿಸುವ ಇವರು ವಿದ್ಯಾರ್ಥಿಗಳ ನೆಚ್ಚಿನ ಗೆಳತಿಯು ಹೌದು, ಸರ್ಕಾರಿ ಶಾಲೆ ಮುಚ್ಚುತ್ತಿರುವ ಈ ದಿನಗಳಲ್ಲಿ ಇಂತಹ ಶಿಕ್ಷಕರಿಂದ ಶಾಲೆಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತಿದ್ದೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾನಹಳ್ಳಿ ಸರ್ಕಾರಿ ಶಾಲೆ ಕುರಿತು ಸಾರ್ವಜನಿಕ ವಲಯದಲ್ಲಿ ಹಿಂದಿನಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು ಉತ್ತಮ ಮಾದರಿ ಶಾಲೆಯಾಗಿ ಪರಿವರ್ತಿಸುವಲ್ಲಿ ಶಿಕ್ಷಕಿ ಇಂಪಾ ಅವರ ಕೊಡುಗೆ ಮುಖ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ತೋರುವಂತೆ ಮಾಡಿರುವುದು ಅಷ್ಟೇ ಸತ್ಯವಾಗಿದೆ.

ಹಾಗೆ ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಿಕ್ಷಕಿ ಇಂಪಾ ಸವೀನ್, ಪ್ರಶಸ್ತಿಯ ನಿರೀಕ್ಷೆ ನನಗಿರಲಿಲ್ಲ. ಸಹಜವಾಗಿ ಅತ್ಯುತ್ತಮ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು ದೊಡ್ಡ ಸಂಖ್ಯೆಯ ಅರ್ಜಿದಾರರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು ಅಷ್ಟು ಜನರ ನಡುವೆ ನನಗೆ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಕೇಳಿ ತುಂಬಾ ಆಶ್ಚರ್ಯವಾಯಿತು, ಪ್ರಶಸ್ತಿಗೆ ಬಾಜನರಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚು ಮಾಡಿದ್ದಾಗಿ ತಿಳಿಸಿದರು. ನನ್ನನ್ನು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಿದ ಸಮಿತಿಗೆ ಧನ್ಯವಾದಗಳು ಅರ್ಪಿಸಿದರು

ಫೆಬ್ರವರಿ 22ರಂದು ಶ್ರೀಮತಿ ಇಂಪಾ ಸವೀನ್ ಅವರಿಗೆ ಜ್ಞಾನ – ವಿಜ್ಞಾನ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರ ದಲ್ಲಿ ಪ್ರಶಸ್ತಿ ಪ್ರಧಾನ ಮಾಡುವುದಾಗಿ ಸಮಿತಿಯ ಅಧ್ಯಕ್ಷ ಮುಗುಳಿಕಟ್ಟೆ ಲೋಕೇಶ್ ತಿಳಿಸಿದ್ದಾರೆ

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments