ಮೂಡಿಗೆರೆ: ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಭಾರೀ ತಲೆನೋವಾಗಿವೆ. ಕಳಪೆ ನಿರ್ವಹಣೆ, ಮಳೆ ಮತ್ತು ಭಾರೀ ವಾಹನಗಳ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಲಘು ವಾಹನ ಚಾಲಕರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದು, ಬೈಕ್‌ಗಳಿಗೂ ಹಾನಿಯಾಗಿವೆ. ಇನ್ನೂ ಕಾರುಗಳು ಗುಂಡಿಗೆ ಬಿದ್ದು ಕಾರ್ ವ್ಹೀಲ್ ಕವರ್ ಎಗರಿ ಹೋಗಿವೆ.
ವಾಹನ ಸವಾರರ ಸಂಕಷ್ಟ ಕಂಡ ಕೊಟ್ಟಿಗೆಹಾರದ ಗ್ರಾಮಸ್ಥರಾದ ಪೂರ್ಣಿಮಾ, ಶರಣ್ಯ, ಅಬ್ಬಾಸ್, ಸುಮನ್ ಸ್ವಯಂಪ್ರೇರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಈ ವೇಳೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಕ್ಷಣವೇ ಶಾಶ್ವತ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕೊಟ್ಟಿಗೆಹಾರದ ಗ್ರಾಮಸ್ಥರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಕೂಡ ವ್ಯಕ್ತ ಆಗಿದೆ…
