ಮೂಡಿಗೆರೆ : ಜನ್ನಾಪುರ ವರ್ತಕರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗೊಣಿಬೀಡು ವಲಯದ ಇಂಚರ ಒಕ್ಕೂಟ ಮೂಡಿಗೆರೆ ವತಿಯಿಂದ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಅಣಜೂರು ಗ್ರಾಮದ ಮಮತಾ ಏ ಬಿ ದೇವರಾಜ್ ಅವರಿಗೆ ವೈಭವ ಮಹಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸಫಿಯಾ ಅವರ ಅದ್ಯಕ್ಷತೆಯಲ್ಲಿ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಮತಾ ಎ ಬಿ ಅವರು ಸುಮಾರು 11 ವರ್ಷಗಳ ಕಾಲ ಗೋಣಿಬಿಡಿನ ಪಿ ಎಚ್ ಸಿ ಜನ್ನಾಪುರ ಸಬ್ ಸೆಂಟೆರ್ ನಲ್ಲಿ ಸುಮಾರು 1776 ಜನಸಂಖ್ಯೆ ಇರುವ ಈ ಭಾಗದಲ್ಲಿ ಗರ್ಭಿಣಿಯರು, ಪುಟ್ಟ ಮಕ್ಕಳು, ಮತ್ತು ಬಾಣಂತಿಯರಿಗೆ ಆರೋಗ್ಯದ ಕುರಿತು ಉತ್ತಮ ಮಾಹಿತಿ ನೀಡುವುದರ ಮೂಲಕ ತನ್ನ ಸೇವೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ಇವರ ಅವಧಿಯಲ್ಲಿ ಯಾವುದೇ ರೀತಿಯ ಸಣ್ಣ ಲೋಪಗಳಾಗದ ರೀತಿ ಎಚ್ಚರ ವಹಿಸಿ ಸೇವೆ ಸಲ್ಲಿಸಿದ್ದು ಮೊನ್ನೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂಚರ ಮಹಿಳಾ ತಾಲೂಕು ಒಕ್ಕೂಟ ಮೂಡಿಗೆರೆ ವತಿಯಯಿಂದ ಶ್ರೀಮತಿ ಮಮತಾ ಅವರಿಗೆ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಶಾ ಆರೋಗ್ಯ ಕಾರ್ಯಕರ್ತೆಯರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷಿನ್ ಅಡಿಯಲ್ಲಿ ಸ್ಥಾಪಿಸಲಾದ ತರಬೇತಿ ಪಡೆದ ಮಹಿಳಾ ಆರೋಗ್ಯ ಸ್ವಯಂಸೇವಕರಾಗಿದ್ದು ಗ್ರಾಮೀಣ ಜನಸಂಖ್ಯೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರು ಆಶಾ ಕಾರ್ಯಕರ್ತಯರು ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ.
ಕೋವಿಡ್ ಅಂತ ಮಹಾಮಾರಿ ಬಂದಾಗಲೂ ಆಶಾ ಕಾರ್ಯಕರ್ತರು ತಮ್ಮ ಪ್ರಾಣದ ಹಂಗು ತೊರೆದು ಮನೆ ಮನೆಗೆ ತರಳಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ. ಆಶಾ ಕಾರ್ಯಕರ್ತೆಯರ ಬದುಕಿನಲ್ಲಿ ಸಾಕಷ್ಟು ಕಷ್ಟವಿದ್ದರೂ ಎಷ್ಟು ಮಹಿಳೆಯರು ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಜೊತೆಗೆ ಮಕ್ಕಳ ಪಾಲನೆ, ವಿದ್ಯಾಭ್ಯಾಸದ ಖರ್ಚುಗಳು ಹೆಚ್ಚಳವಾಗಿರುವುದರಿಂದ ಸರ್ಕಾರ ದುಡಿಮೆಗೆ ತಕ್ಕಂತೆ ಆಶಾ ಕಾರ್ಯಕರ್ತೆಯರ ವೇತನವನ್ನು ಕಲ್ಪಿಸಬೇಕು.
ಶ್ರೀಮತಿ ಮಮತಾ ಎ ಬಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಧಾ ಸುಂದರೇಶ್, ಸಂಸ್ಥಾಪಕರು ಸಾಧನ ಮಾನವ ಹಕ್ಕುಗಳ ಕೇಂದ್ರದ ಡಾ.ಇಸಬೆಲಾ ಝೋವಿಯರ್, ಪಿ ಡಿ ಒ ಪ್ರತಿಮಾ ಡಿ ಎಸ್, ಡಾ. ಅರುಣ್ ಲೋಬೊ, ಧರ್ಮ ಗುರುಗಳಾದ ಫಾ. ಸುನಿಲ್ ಝೋಡಿಗ್ರಸ್, ಐ ವಿ ಪಿಂಟೋ, ಸಂಯೋಜಕರು ಗ್ರಾಮ ಪಂಚಾಂಯಿತಿ ಚುನಾಯಿತ ಒಕ್ಕೂಟ ಮೂಡಿಗೆರೆ ಶ್ರೀಯುತ ನವೀನ್, ಐಶ್ವರ್ಯ ಮಹಾ ಸಂಘದ ಅಧ್ಯಕ್ಷೆ ಬುಶ್ರಾ, ಗೋಣಿಬೀಡು ಸಂಪತ್ತು ಮಹಾ ಸಂಘದ ಅಧ್ಯಕ್ಷೆ ಶುಭ ಮತ್ತು ಇಂಚರ ಒಕ್ಕೂಟ ಸಂಘದ ಸಂಯೋಜಕರು, ಕಾರ್ಯಕರ್ತರು ಸಂಘದ ಸದಸ್ಯರು ಭಾಗಿಯಾಗಿದ್ದರು.
