Thursday, July 30, 2026
Homeಕ್ರೈಮ್ಕಡೂರು: ಬೈಕ್ & ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮಹಿಳೆ ಸಾವು!

ಕಡೂರು: ಬೈಕ್ & ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮಹಿಳೆ ಸಾವು!

Telegram Group
Join Now

ಚಿಕ್ಕಮಗಳೂರು: ಕಡೂರು –  ಬೀರೂರು ಸಮೀಪದ ಬಳ್ಳಿಗನೂರು ಗ್ರಾಮದಲ್ಲಿ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸರಸ್ವತಿಪುರ ಗ್ರಾಮದ ನಿವಾಸಿ ಗೌರಮ್ಮ (63) ಮೃತಪಟ್ಟವರು. ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದ ಗೌರಮ್ಮ ಅವರನ್ನು ಚಿಕಿತ್ಸೆಗಾಗಿ ತರೀಕರೆ ತಾಲ್ಲೂಕು ಲಿಂಗದಹಳ್ಳಿಗೆ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.

ಗೌರಮ್ಮ ಪತಿ ಶಿವಣ್ಣ ಹಾಗೂ ಮಗ ರಾಜು ಅವರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments