ಮೂಡಿಗೆರೆ: ಪ್ರವಾದಿ ಮಹ್ಮದ್ ಮುಸ್ತಫಾರವರ 1500ನೇ ಜನ್ಮದಿನಾಚರಣೆ ಅಂಗವಾಗಿ ಬದ್ರಿಯ್ಯೀನ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಅಲ್-ಇಹ್ ಸಾನ್ ಯೂತ್ ಅಸೋಸಿಯೇಶನ್, ಮೂಡಿಗೆರೆ ಇವರ ಸಂಯುಕ್ತಾ ಆಶ್ರಯದಲ್ಲಿ ಮಿಲಾದ್ ಸಂಗಮ- 2025 ಕಾರ್ಯಕ್ರಮವನ್ನ ಮೂಡಿಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದಲ್ಲಿ ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಮಾಜಕ್ಕೆ ಪ್ರೇರಣೆಯಾದರು. ಈ ವೇಳೆ ಸಮಾಜಸೇವಕರಾದ ಫಿಶ್ ಮೋನು ಅವರಿಗೆ ವಿಶೇಷ ಸನ್ಮಾನ ಮಾಡಿ, ಫಿಶ್ ಮೋನು ಅವರ ಸಾಮಾಜಿಕ ಕಳಕಳಿಯನ್ನ ಪ್ರಶಂಶಿಸಲಾಯ್ತು.56 ವರ್ಷದ ಫಿಶ್ ಮೋನು ಅವರು 56ನೇ ಬಾರಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರಾದ ರಾಜಶೇಖರ್, ಇನ್ಸ್ ಪೆಕ್ಟರ್ ಗಳಾದ ಶ್ರೀನಾಥ್ ರೆಡ್ಡಿ, ಹರ್ಷವರ್ಧನ್ ಉಪಸ್ಥಿತರಿದ್ರು. ಆಡಳಿತ ಮಂಡಳಿ ಅಧ್ಯಕ್ಷರಾದ ಎಂ ಷರೀಫ್, ಗೌರವಾಧ್ಯಕ್ಷರಾದ ಸಿ.ಕೆ ಇಬ್ರಾಹಿಂ, ಕಾರ್ಯದರ್ಶಿ ಇಸ್ಮಾಯಿಲ್, ವೈದ್ಯರಾದ ಮಹ್ಮದ್ ಅಫ್ರೋಜ್, ಮಸೀದಿ ಗುರುಗಳಾದ ಮುಸ್ತಾಫ ಯಮನಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
