ಮೂಡಿಗೆರೆ: 77ನೇ ಗಣರಾಜ್ಯೋತ್ಸವ ಆಚರಣೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಮಂಡಳಿ ವತಿಯಿಂದ ಸಡಗರ ಸಂಭ್ರಮದಿಂದ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಅಪಾರ ದೇಶಭಕ್ತಿಯ ಉತ್ಸಾಹದಿಂದ ಆಚರಿಸಲಾಯಿತು
ಕಾರ್ಯಕ್ರಮವು ಭಾರತೀಯ ಸಂವಿಧಾನದ ಚೈತನ್ಯವನ್ನು ಗೌರವಿಸಲು ಮತ್ತು ರಾಷ್ಟ್ರದ ವೈವಿಧ್ಯತೆ ಮತ್ತು ಏಕತೆಯನ್ನು ಆಚರಿಸಲು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿತು.
ಈ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳು, ಸಾಂಪ್ರದಾಯಿಕ ನೃತ್ಯಗಳು ಮತ್ತು ಭಾರತದ ಶ್ರೀಮಂತ ಪರಂಪರೆಯ ಸಾರ ಮತ್ತು ಗಣರಾಜ್ಯೋತ್ಸವದ ಮಹತ್ವವನ್ನು ಪ್ರತಿಬಿಂಬಿಸುವ ನಾಟಕೀಯ ಪ್ರಸ್ತುತಿಗಳು ಸೇರಿದಂತೆ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಈ ಆಚರಣೆಯಲ್ಲಿ ದೇಶ ಭಕ್ತಿ ಸಾರುವ ಸ್ತಬ್ದ ಚಿತ್ರಗಳು ಸಾರ್ವಜನಿಕರ ಕಣ್ಣನ್ನು ಸೆಳೆದವು. ಉತ್ತಮ ಸ್ತಬ್ದ ಚಿತ್ರಕ್ಕೆ ಶಾಸಕಿ ನಯನ ಮೋಟಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಜನಪ್ರಿಯ ಶಾಸಕಿ ಶ್ರೀಮತಿ ನಯನ ಮೋಟಮ್ಮ ಗಣರಾಜ್ಯೋತ್ಸವವು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಮತ್ತು ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಎತ್ತಿಹಿಡಿಯುವ ನಮ್ಮ ಸಾಮೂಹಿಕ ಜವಾಬ್ದಾರಿಯ ಜ್ಞಾಪನೆಯಾಗಿದೆ.
20 ವರ್ಷಗಳಿಂದ ಅಸಾಧ್ಯವಾಗಿದ್ದ ನಿವೇಶನ ಹಂಚಿಕೆ ಸಮಸ್ಯೆ ಬಗೆಹರಿಸಿ 46 ಹಳ್ಳಿಗಳ ಜನರಿಗೆ ಹಕ್ಕು ಪತ್ರ ನೀಡಲು ಮುಂದಾಗಿದ್ದು ಈ ವಿಚಾರವನ್ನು ಈ ದಿನ ಉಲ್ಲೇಖಿಸಲು ಹೆಮ್ಮೆ ಯಾಗುತ್ತದೆ ಎಂದರು
ನಮ್ಮ ಸಂವಿಧಾನದ ಬದ್ಧತೆ ಸಮಾನತೆ ಯಿಂದ ಕೂಡಿದ್ದು ಮತ ಪ್ರಭುಗಳ ಆಶೀರ್ವಾದ ದಿಂದ ನಾನಿಲ್ಲಿ ನಿಂತಿದ್ದು ಸಾರ್ವಜನಿಕ ಬಂದುಗಳ ಸೇವೆ ಯನ್ನ ಪ್ರಾಮಾಣಿಕತೆಯಿಂದ ಮಾಡುತ್ತಿರುವುದಾಗಿ ತಿಳಿಸಿದರು.
ಮಾಧ್ಯಮಗಳಲ್ಲಿ ಗಮನಿಸಿದಂತೆ ಚಲನಚಿತ್ರ ನಟ ಡಾಲಿ ಧನಂಜಯ ಅವರ ಬಗ್ಗೆ ಟೀಕೆ ಟಿಪ್ಪಣಿ ಕುರಿತು ಪ್ರಶ್ನೆ ಮೂಡಿದ್ದು, ನಮ್ಮ ಸಂವಿಧಾನದಲ್ಲಿ ಆಯ್ಕೆ ಮಾಡುವ ಹಕ್ಕು ನೀಡಿದ್ದು ವ್ಯಕ್ತಿ ಧರಿಸುವ ಬಟ್ಟೆ ಬಗ್ಗೆ ಪ್ರಶ್ನಿಸುತ್ತಿದ್ದೂ, ಸಂವಿಧಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದೆವ ಅಥವಾ ಪರರಿಗೆ ಸ್ವಂತಂತ್ರ್ಯ ನೀಡುತ್ತಿದ್ದೇವ ಪ್ರಶ್ನೆ ಕಾಡುತ್ತಿದೆ. ಮುಂದಿನ ಪೀಳಿಗೆ ಮಕ್ಕಳಿಗೆ ಸಂವಿಧಾನದ ಅರಿವು ಸರಿಯಾಗಿ ತಿಳಿಸಬೇಕು ಎಂದರು.
ಕೇಂದ್ರ ಸರ್ಕಾರ ತಂದಿರುವ ಕಾನೂನು VBG ಕಾಯ್ದೆ ಉದ್ಯೋಗ ಖಾತ್ರಿ ಯೋಜನೆ ಬದಲಾವಣೆ ಪರಿಣಾಮ ಕುರಿತು ಅಸಮಾಧಾನ ವ್ಯಕ್ತಪಡಿಸಿ. ಖಂಡಿಸಿದರು.
ಆಂತರಿಕ ವಿಚಾರದಲ್ಲಿ ಆನೇಕ ಪ್ರಶ್ನೆಗಳು ಬರುತ್ತಿದ್ದು, ಶಾಸಕಿಯಾಗಿ ಪಕ್ಷದ ಬದ್ಧತೆ ಯನ್ನು ಬಿಡದೆ ಕಾರ್ಯ ನಿರ್ವಹಿಸುತ್ತಿದ್ದು. ನನ್ನನ್ನು ಪ್ರಶ್ನಿಸುವ ಹಕ್ಕು ಮತ ದಾರರಿಗೆ ಮಾತ್ರ ಇದೆ ಕಾನೂನು ಸಮಾನತೆ ಗೌರವದಿಂದ ಸಾರ್ವಜನಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದೂ ಪಾಳೆಗಾರಿಕೆ ರಾಜಕಾರಣ ಮಾಡಿಲ್ಲ. ಅಂತವರಿಗೆ ಅವಕಾಶ ಇಲ್ಲಾ ಎಂಬುದಾಗಿ ತಿಳಿಸಿದರು.
ರಾಷ್ಟ್ರದ ಏಳಿಗೆ, ತಾಲೂಕಿನ ಸಮಗ್ರ ಜನತೆಯ ಹಿತದೃಷ್ಟಿಯಿಂದ ಒಂದಾಗಿ ಕೆಲಸ ಮಾಡೋಣ ಎಂಬದಾಗಿ ರಾಜ್ಯೋತ್ಸವದ ಶುಭಾಶಯಗಳು ತಿಳಿಸಿ ಮಾತಿಗೆ ವಿರಾಮ ಹೇಳಿದರು
ರಾಷ್ಟ್ರಧ್ವಜರೋಹಣವನ್ನು ರಾಷ್ಟೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷೆ ದಂಡಾಧಿಕಾರಿ ಶ್ರೀಮತಿ ಅಶ್ವಿನಿ ನೆರವೇರಿಸಿ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಮಹತ್ವ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ದಯವತಿ, ಪೊಲೀಸ್ ವೃತ್ತ ನಿರೀಕ್ಷಿಕ ರಾಜಶೇಖರ್. ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹಕೀಮ್,ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಮೇಶ್ ಹೊಸಕೆರೆ, ಪ. ಪಂ. ನಾಮ ನಿರ್ದೇಶನ ಸದಸ್ಯ ಚಿಕ್ಕಳ ಶಂಕರ್ ಗೌಡ. ಪ.ಪಂ.ಸದಸ್ಯ ಹಂಜಾ. ಸಂಪತ್ ಬಿಳಗುಳ,ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ,ರವಿ ಕುನ್ನಹಳ್ಳಿ. ಸುಧೀರ್ ಚಕ್ರಮಣಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ನವೀನ್,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಕ್ಷ್ಮಣ ಗೌಡ, ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಪುನೀತ್ ಕಡಿದಾಳು
9483811948
