ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿ ಬಳಿ ಕಾಡಾನೆ ಗುಂಪೊಂದು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದನ್ನು ನೋಡಬಹುದು.ಹಾಗೆ ಇತರ ತೋಟಗಳಿಗೂ ಚಲಿಸುವ ಸಾಧ್ಯತೆ ಇದ್ದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಮಾಕೋನಹಳ್ಳಿ, ಹೊರಟ್ಟಿ, ಘಟ್ಟದಃಳ್ಳಿ, ಕೆಲ್ಲೂರು, ನಂದಿಪುರ, ಮೂಡಸಸಿ, ಕಡೆಮಡ್ಕಲ್, ನಡುವಿನ ಮಡ್ಕಲ್, ಬಾರದಹಳ್ಳಿ, ಕಡುವಿನಹಳ್ಳಿ ಹಾಗೂ ಸುತ್ತಾಮುತ್ತ ನಿವಾಸಿಗಳು ಯಾರೂ ಕೂಡ ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ಎಚ್ಚರವಹಿಸಲು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೀಗಾಗಿ ಮಾಕೋನಹಳ್ಳಿ- ಮೂಡಿಗೆರೆ ಮಾರ್ಗದಲ್ಲಿ ವಾಹನ ಸಂಚಾರಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.