Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ABVP ಘಟಕದ ವತಿಯಿಂದ ಸಾಮಾಜಿಕ ಸಾಮರ್ಥ್ಯ ದಿವಸ್ ಆಚರಣೆ

ಮೂಡಿಗೆರೆ: ABVP ಘಟಕದ ವತಿಯಿಂದ ಸಾಮಾಜಿಕ ಸಾಮರ್ಥ್ಯ ದಿವಸ್ ಆಚರಣೆ

ಮೂಡಿಗೆರೆ: ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ಘಟಕದ ವತಿಯಿಂದ ಸಾಮಾಜಿಕ ಸಾಮರ್ಥ್ಯ ದಿವಸ್ ಕಾರ್ಯಕ್ರಮವನ್ನು ಪಟ್ಟಣದ ಡಿಎಸ್ ಬಿಜಿ ಕಾಲೇಜಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಯಶವಂತ್ ಗೌಡ, ಸಾಮಾಜಿಕ ಸಾಮರ್ಥ್ಯಎಂಬುದು ಪ್ರತಿಯೊಂದು ದಿನವೂ ಸಾಮಾಜಿಕ ನ್ಯಾಯ, ಸಮಾನತೆ ಒಳಗೊಳ್ಳುವಿಕೆಯ ದಿಕ್ಕಿನಲ್ಲಿ ಸಮಾಜವನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತದೆ ಎಂದರು

ಈ ದಿನವನ್ನು ಸಂಪರ್ಕ ಸಾಧಿಸಲು ಮತ್ತು ವಿಚಾರ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಸ್ಮರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಪ್ರಭಾವ, ಅವುಗಳ ಪ್ರಯೋಜನಗಳು ಮತ್ತು ಸವಾಲುಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ

ಅನ್ಯಾಯದ ವಿರುದ್ಧ ಧ್ವನಿ ಎತ್ತಲು, ಸಾಮಾಜಿಕ ಸಮಗ್ರತೆಯನ್ನು ಉತ್ತೇಜಿಸಲು ಇಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರ್ಷಿತ್, ನಗರ ಕಾರ್ಯದರ್ಶಿ ಶ್ರವಣ್,
ಉಪಾಧ್ಯಕ್ಷ ಸಾತ್ವಿಕ್‌, ಪ್ರಮುಖ್, ರತನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!