Friday, February 27, 2026
Homeಜಿಲ್ಲಾಸುದ್ದಿಮೂಡಿಗೆರೆ : ಅಂಗನವಾಡಿ ಶಿಕ್ಷಕಿ ಸಾವು: ನ್ಯಾಯ ಒದಗಿಸಲು ಬಿಜೆಪಿ ಯುವ ಮೋರ್ಚಾ ಮನವಿ

ಮೂಡಿಗೆರೆ : ಅಂಗನವಾಡಿ ಶಿಕ್ಷಕಿ ಸಾವು: ನ್ಯಾಯ ಒದಗಿಸಲು ಬಿಜೆಪಿ ಯುವ ಮೋರ್ಚಾ ಮನವಿ

ಮೂಡಿಗೆರೆ: ಅಂಗನವಾಡಿ ಶಿಕ್ಷಕಿ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಾರೇಶ್ ಜೇನುಬೈಲ್ ಮಾತನಾಡಿ ಈ ಸಾವು ಕುಟುಂಬಕ್ಕೆ ತುಂಬುಲಾರದ ನಷ್ಟ. ದುರ್ಗಟನೆ ನಡೆದು ಕುಟುಂಬ ಬೀದಿ ಪಾಲಾಗಿದೆ.

ಈ ಸಾವಿಗೆ ಕಾರಣವಾದ ಇಂಜಿನಿಯರ್ ಮತ್ತು ಗುತ್ತಿಗೆದಾರದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್ ಮಾತನಾಡಿ ಅವರು ಪಟ್ಟಣದಲ್ಲಿ ಅಮೃತ್ ಯೋಜನೆಯಡಿ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟ ಕಾರಣ ಅಂಗನವಾಡಿ ಶಿಕ್ಷಕಿ ಸಂಪ್ರೀತ ಅಪಘಾತಗೋಳಗಾಗಿ ಮರಣ ಅಪ್ಪಿದ್ದು ಇಡೀ ಕುಟುಂಬವೇ ಇವರ ದುಡಿಮೆಯಿಂದ ಬದುಕುತ್ತಿತ್ತು ಸಾವಿನಿಂದ ಕುಟುಂಬ ಕಂಗಲಾಗಿದೆ.

ಅಂಗನವಾಡಿ ಶಿಕ್ಷಕಿ ಸಾವಿಗೆ ಕಾರಣವಾದ ಇಂಜಿನಿಯರ್ ಮತ್ತು ಗುತ್ತಿಗೆದಾರದ ವಿರುದ್ದ ಕ್ರಮ
ಶಿಕ್ಷಕಿ ಸುಜಾತ ಸಾವು ಬದುಕಿನ ನಡುವೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದು ಇದಕ್ಕೆ ಕಾರಣವಾಗಿರುವ ಕ್ರೈನ್ ಆಪರೇಟರ್ ಪಟ್ಟಣ ಪಂಚಾಯಿತಿ ಮುಖ್ಯ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಇವರುಗಳ ವಿರುದ್ಧ ಪ್ರಕರಣದ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದರು

ಹಾಗೂ ಮರಣ ಅಪ್ಪಿರುವ ಗಾಯಾಳು ಅಂಗನವಾಡಿ ಶಿಕ್ಷಕರಿಗೆ ಪರಿಹಾರವನ್ನು ನೀಡಬೇಕು ಪಟ್ಟಣದ ಬೀದಿ ಬೀದಿಯಲ್ಲಿ ಮಾಡಿರುವ ಗುಂಡಿಗಳನ್ನು ಶೀಘ್ರವೇ ಮುಚ್ಚಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಮೂಡಿಗೆರೆ ಸುತ್ತಮುತ್ತ ರಸ್ತೆಗಳು ಗುಂಡಿಮಯ ವಾಗಿದ್ದು ಈಗಾಗಲೇ ಅನೇಕ ಬಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಮನವಿ ಸಲ್ಲಿಸಿದ್ದು ಇಲ್ಲಿನ ಶಾಸಕರು ಮತ್ತು ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು ಇನ್ನಷ್ಟು ಅನಾಹುತ ಆಗುವ ಮುಂಚೆ ಗಮನವಹಿಸಿ ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸರೋಜ ಸುರೇಂದ್ರ,ಹೆಸ್ಗಲ್ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ, ಶಶಿ ಕೇಲ್ಲೂರು,ಸಚಿನ್ ಹಳೇ ಮೂಡಿಗೆರೆ ಅನಿಲ್ ಛತ್ರ ಮೈದಾನ, ಹೆಸ್ಗಲ್ ಗ್ರಾಮ ಪಂಚಾಯತಿ ಸದಸ್ಯ ಪೂರ್ಣೇಶ್ ಲೋಕೇಶ್ ಬಿಳಗುಳ ಸೇರಿದಂತೆ ಅನೇಕರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!