ಮೂಡಿಗೆರೆ: ಕ್ರೇನ್ ನುಗ್ಗಿಸಿ ಅಂಗನವಾಡಿ ಶಿಕ್ಷಕಿ ಸಾವು ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಮೂಡಿಗೆರೆ ಪಟ್ಟಣ ಪಂಚಾಯತ್ ಸದಸ್ಯ ಮನೋಜ್ ದೂರು ನೀಡಿದ್ದಾರೆ.
ಹೌದು.. 8ಮೂಡಿಗೆರೆ ತಹಸೀಲ್ದಾರ್ ಗೆ ದೂರು ನೀಡಿದ ಮನೋಜ್ ಕಾಮಗಾರಿ ನೆಪದಲ್ಲಿ ಡೆಡ್ಲಿ ಗುಂಡಿಗಳ ನಿರ್ಮಾಣವಾಗಿದ್ದು ಹಾಗೆ ಮಂದಗತಿ ಪೈಪ್ ಲೈನ್ ಕಾಮಾಗಾರಿಯಿಂದಾಗಿ ಸಾವಾಗಿದೆ ಇನ್ನೂ ಎಷ್ಟು ಜನ ಬಲಿ ಪಡೆಯಬೇಕು ಎಂದು ಕಿಡಿಕಾರಿದ್ದಾರೆ
ಕಳೆದ 2 ದಿನದ ಹಿಂದೆ ಮೂಡಿಗೆರೆಯಸಂತೇಮೈದಾನದಲ್ಲಿ ನಡೆದಿದ್ದ ಪ್ರಕರಣವಾಗಿದ್ದುನಾಲ್ಕೈದು ತಿಂಗಳಿಂದ ಮೂಡಿಗೆರೆ ಪಟ್ಟಣ ಗುಂಡಿಮಯವಾಗಿದ್ದು ಹಾಗಾಗಿ ಗುಂಡಿ ಮುಚ್ಚುವಾಗ ಶಿಕ್ಷಕಿ ಬಲಿ ಪಡೆದ ಕ್ರೇನ್ ಚಾಲಕ ಆದರೆ ಈವರೆಗೆ ಕ್ರೇನ್ ಚಾಲಕನ್ನು ಬಂಧಿಸಿಲ್ಲ ಎಣದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಮೂಡಿಗೆರೆ ಜನತೆ ಇನ್ನಾದರು ಜಿಲ್ಲಾಡಳಿತ, ಪಟ್ಟಣ ಪಂಚಾಯತ್ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾ ಕಾದುನೋಡಬೇಕಿದೆ.
