Tuesday, July 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಅಂಬೇಡ್ಕ‌ರ್ ಜಯಂತಿ ಅಂಗವಾಗಿ ಏ.17ರಂದು ಬೃಹತ್ ಬೈಕ್ ಜಾಥಾ: ಸುಂದ್ರೇಶ್ ಕನ್ನಾಪುರ

ಮೂಡಿಗೆರೆ: ಅಂಬೇಡ್ಕ‌ರ್ ಜಯಂತಿ ಅಂಗವಾಗಿ ಏ.17ರಂದು ಬೃಹತ್ ಬೈಕ್ ಜಾಥಾ: ಸುಂದ್ರೇಶ್ ಕನ್ನಾಪುರ

Telegram Group
Join Now

ಮೂಡಿಗೆರೆ: ಭೀಮ ಕೊರೇಂಗಾವ್ ಆಚರಣೆ ಸಂಘದ ವತಿಯಿಂದ ಏ.24ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಜಯಂತಿ ಕೇವಲ ಒಂದು ಸ್ಮರಣೆ ದಿನವಲ್ಲ. ಬದಲಾಗಿ ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಪಸರಿಸುವ ಮಹತ್ವದ ದಿನವಾಗಿದೆ. ಹಾಗಾಗಿ ನಮ್ಮ ಸಂಘದಿಂದ ಅದ್ದೂರಿಯಾಗಿ ಅಂಬೇಡ್ಕರ್ ಜಯಂತೋತ್ಸವ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ಏ.17ರಂದು ಬೆಳಗ್ಗೆ 11 ಗಂಟೆಗೆ ಕೊಲ್ಲಿಬೈಲ್‌ನಿಂದ ಹ್ಯಾಂಡ್‌ ಪೋಸ್ಟ್ ಸರ್ಕಲ್‌ವರೆಗೆ ಬೃಹತ್ ಮಟ್ಟದಲ್ಲಿ ಬೈಕ್ ಜಾಥ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಖಜಾಂಚಿ ಭಾನುಪ್ರಕಾಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments