Wednesday, July 8, 2026
Homeಜಿಲ್ಲಾಸುದ್ದಿMudigere: ಮಳೆಯ ಆರ್ಭಟಕ್ಕೆ ಕುಸಿದ ಮುಗ್ರಹಳ್ಳಿ ಗ್ರಾಮದ ಸೇತುವೆ: ಕಾಮಗಾರಿ ನಿಲ್ಲಿಸಲು ಗ್ರಾಮಸ್ಥರ ಆಗ್ರಹ!

Mudigere: ಮಳೆಯ ಆರ್ಭಟಕ್ಕೆ ಕುಸಿದ ಮುಗ್ರಹಳ್ಳಿ ಗ್ರಾಮದ ಸೇತುವೆ: ಕಾಮಗಾರಿ ನಿಲ್ಲಿಸಲು ಗ್ರಾಮಸ್ಥರ ಆಗ್ರಹ!

Telegram Group
Join Now

ಮೂಡಿಗೆರೆ: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವ ನಡುವೆಯೇ ಮುಗ್ರಹಳ್ಳಿ ಗ್ರಾಮದ ಹೇಮಾವತಿ ನದಿ ಸೇತುವೆಯ ತಡೆಗೋಡೆ ನಿರ್ಮಾಣ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿ ಸಲುವಾಗಿ ಮುಖ್ಯ ರಸ್ತೆಯ ಪಕ್ಕದಲ್ಲೇ ಸುಮಾರು 20 ಅಡಿ ಆಳದ ಗುಂಡಿಗಳನ್ನು ತೋಡಲಾಗಿದ್ದು, ಅಪಾಯವನ್ನು ತಡೆಯಲು ಅಗತ್ಯವಾದ ಬ್ಯಾರಿಕೇಡ್‌ಗಳು ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ . ಇದರಿಂದ ವಾಹನ ಸವಾರರು ಹಾಗೂ ಪ್ರಾಣಿಗಳು ಗುಂಡಿಗೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಜೀವಹಾನಿಯ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಯ ಸಂದರ್ಭದಲ್ಲಿ ಇಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದ್ದರಿಂದ ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬ್ಯಾರಿಕೇಡ್‌ಗಳು, ಎಚ್ಚರಿಕೆ ಫಲಕಗಳು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments