ಮೂಡಿಗೆರೆ : ರಾಷ್ಟ್ರ ಭಕ್ತ ಸಂಘಟನೆ ರಾಷ್ಟೀಯ ಸ್ವಯಂ ಸೇವಕ ಸಂಘಟನೆ ವಿರುದ್ಧ ನಾಲಿಗೆ ಹರಿ ಬಿಟ್ಟಿರುವ ಪ್ರಿಯಾಂಕಾ ಖರ್ಗೆ ಹೇಳಿಕೆ ಖಂಡಿಸಿ ಹಾಗೂ ರಾಜ್ಯ ಸರ್ಕಾರ RSS ಬ್ಯಾನ್ ಮಾಡುವ ಕುರಿತಾಗಿ ನಾಳೆ ಸ್ವಯಂ ಪ್ರೇರಿತ ಬಂದ್ ಮಾಡುವಂತೆ ನಾಗರಿಕರಿಕ ಬಂದುಗಳು ಮನವಿ ಮಾಡಿದ್ದಾರೆ
RSS ಬ್ಯಾನ್ ಹೇಳಿಕೆ ಖಂಡಿಸಿ ಹಿಂದೂ ಸಂಘಟನೆಗಳಾದ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಶ್ರೀರಾಮಸೇನೆ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ಮೂಡಿಗೆರೆ ಪಟ್ಟಣ ಬಂದ್ ಮಾಡುವಂತೆ ತಿಳಿಸಲಾಗಿದೆ. ಸ್ವಯಂ ಪ್ರೇರಿತ ಬಂದ್ ಗೆ ಸಾಥ್ ನೀಡುವ ಸಾಧ್ಯತೆ ಇದ್ದು, ಸ್ವಯಂ ಪ್ರೇರಿತ ಬಂದ್ ಮಾಡಲು ಅಂಗಡಿ ಮುಂಗಟ್ಟು ಮಾಲೀಕರಿಗೆ ತಿಳಿಸಿವೆ.
ಕೆಲವು ದಿನಗಳ ಹಿಂದೆಷ್ಟೇ ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ ಹೇಳಿಕೆ RSS ಸಂಘಟನೆಗೆ ಅವಮಾನ ಇದನ್ನು ಖಂಡಿಸಿ ಮೂಡಿಗೆರೆ ಪಟ್ಟಣ ಬಂದ್ ಕರೆ ನೀಡಲಾಗಿದೆ.
ಹಾಗಾಗಿ ನಾಳೆ ಸಂಪೂರ್ಣ ಬಂದ್ ಇರಲಿದ್ದು ಮೂಡಿಗೆರೆ ಪಟ್ಟಣದಲ್ಲಿ ವಾಹನ ಸಂಚಾರ,ಹೊರತುಪಡಿಸಿ ವ್ಯಾಪಾರ, ವಹಿವಾಟು ಇರುವುದಿಲ್ಲ ನಾಗರೀಕ ಬಂದುಗಳು ತಮಗೆಲ್ಲರಿಗೂ ಬೇಕಾದ ವಸ್ತುಗಳನ್ನು ಮುಂಚಿತವಾಗಿ ಕೊಂಡು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
