ಮೂಡಿಗೆರೆ: ಚೇತನ ಹಾಗೂ ಗೂಂಜ್ ಇವರ ವತಿಯಿಂದ ಸರ್ಕಾರಿ ಫ್ರೌಢಶಾಲೆ ಚಿನ್ನಿಗಾ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕುರಿತು SDMC ಅಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಶಾಲಾ ಕಾಂಪೊಂಡ್ ಗೆ ಬಣ್ಣ ಹೊಡೆಯುವುದು ಹಾಗೂ ಅಡುಗೆಮನೆ, ಶೌಚಾಲಯ ಶಾಲೆಯ ಹೊರಗಿನ ಆವರಣ ಸ್ವಚ್ಚತಾ ಕಾರ್ಯ ಮಾಡಲಾಗಿದೆ ಎಂದರು.

ಶಾಲೆಯ SDMC ಅಧ್ಯಕ್ಷನಾದ ನನಗೆ ಶಾಲೆಯ ಜಾವಬ್ದಾರಿ ಇರುವುದರಿಂದ ಕಾರ್ಯಕ್ರಮದ ಮುಖಾಂತರ ಶಾಲೆಯ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ತಿಳಿಸಿದರು. ಹಾಗೆ ನಮ್ಮ ಶಾಲೆಯ ಸ್ವಚ್ಚತೆಗೆ ಪಾಲ್ಗೊಂಡ ಸ್ಥಳೀಯರೆಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.
ಚಿಂತನ ಫೌಂಡೇಷನ್ ಅಧ್ಯಕ್ಷರಾದ ಪೂವಪ್ಪ ಆನೇದಿಬ್ಬ ಮಾತನಾಡಿ ಈ ತಿಂಗಳಿನಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬ್ಯಾಗ್, ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ವಿತರಿಸಿಲಾಗಿದೆ. ಅದರ ಜೊತೆ ಮೂಡಿಗೆರೆಯಲ್ಲಿ 15,000 ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.
ಚಿನ್ನಿಗಾ ಗ್ರಾಂ.ಪಂ ಸದಸ್ಯ ಗಂಗು ವೆಂಕಪ್ಪ ಈ ಕಾರ್ಯಕ್ರಮಕ್ಕೆ ಹೆಚ್ಚು ಬೆಂಬಲ ನೀಡಿ ಉತ್ತಮ ಜಾವಬ್ದಾರಿ ನಿಭಾಯಿಸಿದ್ದು ಚಿಂತನ ಫೌಂಡೇಷನ್ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂಧರ್ಭದಲ್ಲಿ ಚಿನ್ನಿಗಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದವರಿಗೂ ಅಭಿನಂದನೆ ಸಲ್ಲಿಸಿದರು.
