Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ದತ್ತ ಮಾಲಾಧಾರಿಗಳಿಂದ ಮಾಕೋನಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ: ಗ್ರಾಮಸ್ಥರ ಮೆಚ್ಚುಗೆ

ಮೂಡಿಗೆರೆ: ದತ್ತ ಮಾಲಾಧಾರಿಗಳಿಂದ ಮಾಕೋನಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ: ಗ್ರಾಮಸ್ಥರ ಮೆಚ್ಚುಗೆ

ಮೂಡಿಗೆರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆ ಬುಧವಾರ ದತ್ತ ಜಯಂತಿಗೆ ಚಾಲನೆ ನೀಡಿದ ಬೆನ್ನಲ್ಲೇ ಸಂಘಟನೆಯ ಧ್ಯೆಯ ವಾಖ್ಯವಾದ ಸೇವೆ, ಸುರಕ್ಷಾ, ಸಂಸ್ಕಾರ ನುಡಿಯಂತೆ ದತ್ತ ಮಾಲೆ ಧರಿಸಿ ಸೇವಾ ಮನೋಭಾವನೆಯಿಂದ ಗ್ರಾಮದಲ್ಲಿ ಶ್ರಮದಾನ ನೆರವೇರಿಸಿದರು.

ಕಾರ್ಯಕರ್ತರು ಪಂಚಾಯಿತಿ ಹಾಗೂ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು

ಈ ಕುರಿತು ಪ್ರತಿಕ್ರಿಯಿಸಿದ ಅಶ್ವಿನ್ ಸೇವಾಕರ್ತರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿ ಶುದ್ಧವಾದ ಗಾಳಿ, ನೀರು ಮತ್ತು ಪ್ರಶಾಂತ ಪ್ರಾಕೃತಿಕ ಪರಿಸರದಿಂದ ನಾವು ಉತ್ತಮ ಆರೋಗ್ಯ ಭಾಗ್ಯವನ್ನು ಹೊಂದಬಹುದು.

ಸೇವಾಮನೋಭಾವದಿಂದ ಸಂಪಾದಿಸಿದ ಪುಣ್ಯ ಶಾಶ್ವತವಾಗಿರುತ್ತದೆ. ದೇವರಿಗೆ ಪ್ರಿಯವಾದ ಸೇವೆ ಮಾಡುವುದರಿಂದ ಆತ್ಮತೃಪ್ತಿ ಮತ್ತು ಸಂತೋಷ ಸಿಗುತ್ತದೆ ಎಂದರು ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದರು

ಈ ಸ್ವಚ್ಛತಾ ಕಾರ್ಯದಲ್ಲಿ ಮಾಕೋನಹಳ್ಳಿ ಘಟಕದ ಬಜರಂಗದಳ ಕಾರ್ಯಕರ್ತರಾದ ಮಣಿ, ಸಂಜಯ್, C. S.ಯೋಗೀಶ್,ಸಂಜಯ್, ಸುದೀಪ್, ಅಭಿ, ಪ್ರಜ್ವಲ್, ಜನಾರ್ದನ್, ಗೌತಮ್,ಹರೀಶ್, ಸಂದೀಪ್, ವಿನಯ್, ಜೀವನ್, ಸುದೀಪ್, ಅಕ್ಷಯ್, ಆಕಾಶ್, ಪ್ರೀತಮ್, ಸುದೀಪ್, ಮದನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ : ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!