Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಸಂಪೂರ್ಣ ತಯಾರಿ :ಸುಂದ್ರೇಶ್ ಕನ್ನಾಪುರ

ಮೂಡಿಗೆರೆ: ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಸಂಪೂರ್ಣ ತಯಾರಿ :ಸುಂದ್ರೇಶ್ ಕನ್ನಾಪುರ

ಮೂಡಿಗೆರೆ: ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಯಾಗಿದೆ ಎಂದು ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ತಿಳಿಸಿದ್ದಾರೆ

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಜನವರಿ 3 ರಂದು ಪಟ್ಟಣದಲ್ಲಿ ಅದ್ದೂರಿ ವಿಜಯೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ ಎಂದರು

ಇದು 1818ರಲ್ಲಿ ಪೇಶ್ವೆಗಳ ಸೈನ್ಯದ ವಿರುದ್ಧ ಮಹಾರ್ ಯೋಧರು ಬ್ರಿಟಿಷ್ ಸೇನೆಯೊಂದಿಗೆ ಸೇರಿ ಸಾಧಿಸಿದ ವಿಜಯವನ್ನು ಸ್ಮರಿಸುತ್ತದೆ. ಇದೊಂದು ಐತಿಹಾಸಿಕ ವಿಜಯ ದಿನವಾಗಿದ್ದು ಈ ಕದನದಲ್ಲಿ ದಲಿತರ ಆತ್ಮ ಗೌರವ ಸ್ವಾಭಿಮಾನ ಹಕ್ಕುಗಳಿಗೆ ಹೋರಾಟದ ಸಂಕೇತವಾಗಿದೆ. ಈ ಬಗ್ಗೆ ದಲಿತ ಸಮುದಾಯಕ್ಕೆ ಜಾಗೃತಿ ಗೊಳಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ವಿಜಯೋತ್ಸವ ಆಚರಿಸುತ್ತ ಬಂದಿರುವುದಾಗಿ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ದಲಿತ ಯುವ ಸಮೂಹ ಹಾಗೂ ಸಂಘದ ಸದಸ್ಯರು ಹಳೇ ಅಧ್ಯಕ್ಷರು. ಪದಾಧಿಕಾರಿಗಳು ಪ್ರಗತಿ ಪರ ಸಂಘಟನೆಯ ಸಹಕಾರದಿಂದ ಭೀಮ ಕೋರೆಗಾಂವ್ ವಿಜಯೋತ್ಸವ ಅದ್ದೂರಿಯಾಗಿ ನಡೆದು ಬಂದಿದೆ ಹಾಗಾಗಿ ಇವರುಗಳ ಮಾರ್ಗದರ್ಶನದಿಂದ ಈ ಬಾರಿ ಅದ್ದೂರಿ ಕಾರ್ಯಕ್ರಮ ನಡೆಸಲು ಸಿದ್ಧತೆಗಳು ಭರದಿಂದ ಸಾಗುತ್ತಿದೆ ಕಾರ್ಯಕ್ರಮಕ್ಕೆ ಉತ್ತಮ ಚಿಂತಕರು , ವಾಗ್ಮಿಗಳನ್ನು ಕರೆಸಿ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!