ಮೂಡಿಗೆರೆ: ರಸ್ತೆಯಲ್ಲಿ ಸ್ಕೂಟಿ ಚಲಾಯಿಸಿಕೊಂಡು ಹೋಗುವಾಗ ಮಹಿಳೆ ಮೇಲೆ ಕ್ರೇನ್ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ಪಟ್ಟಣದ ಸಂತೇ ಮೈದಾನ ಬಳಿ ನಡೆದಿದೆ.
ಹೌದು .. ಸ್ಕೂಟಿ ಚಲಾಯಿಸಿಕೊಂಡು ಬರುತ್ತಿದ್ದಾ ಶಿಕ್ಷಕಿಯರ ಮೇಲೇ ಬಿದ್ದ ಕ್ರೇನ್ ಸಂಪ್ರಿತಾ ಸ್ಥಳದಲ್ಲೇ ಸಾವು ಇನ್ನೊರ್ವ ಶಿಕ್ಷಕಿ ಸುಜಾತ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಗನವಾಡಿ ಶಿಕ್ಷಕಿಯರ ಕಾರ್ಯಕ್ರಮ ನಿಮಿತ್ತ ತಯಾರಿ ಮುಗಿಸಿ ಬಟ್ಟೆ ಬದಲಾಯಿಸಿ ಕೊಂಡು ಬರಲು ಸಹೋದ್ಯೋಗಿ ತಿಳಿಸಿದ್ದಾರೆ. ಮನೆಗೆ ಬಂದು ವಾಪಾಸ್ ಕಾರ್ಯಕ್ರಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ಗಾಯಳು ಸುಜಾತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಬಳಿಕ ಕ್ರೇನ್ ಚಾಲಕ ದಾವುಡ್ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಹೆಸಗಲ್ ಮೂಲದ ಸಂಪ್ರೀತಾ ಇತ್ತೀಚೆಗಷ್ಟೇ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು ಆದರೆ ವಿಧಿ ಬರಹ ಬೇರೆನೆ ಆಗಿತ್ತು ಅನಿಸಿತ್ತು. ಇದಕ್ಕೆ ಯಾರು ಹೊಣೆ ಎಂಬುದಾಗಿದೆ.
