ಚಿಕ್ಕಮಗಳೂರು: ಹಳೇ ಮೂಡಿಗೆರೆ ಪಂಚಾಯಿತಿ ವ್ಯಾಪ್ತಿಗೆ ಬರುವ ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಹಂಪ್ಸ್ ಹಾಗೂ ವೇಗ ನಿಯಂತ್ರಕ ಅಳವಡಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಾಜ್ಯ ಹೆದ್ದಾರಿ 173 ಇದಾಗಿದ್ದು ಹಾಸನ- ಕಡೂರು – ಧರ್ಮಸ್ಥಳ- ಬೆಂಗಳೂರು ಮುಂತಾದ ಕಡೆಯಿಂದ ಧರ್ಮಸ್ಥಳಕ್ಕೆ ಸಾಗುವ ಪ್ರಮುಖ ಸರ್ಕಲ್ ಇದಾಗಿದ್ದು ಮೇಲೆ ವೇಗ ತಡೆ (ಸ್ಪೀಡ್ ಬ್ರೇಕರ್ಸ್) ಹಾಗೂ ಹಂಪ್ಸ್ ಅಳವಡಿಸುವಂತೆ ಒತ್ತಾಯಿಸಿದರು.
ಈ ಮಾರ್ಗವಾಗಿ ಹಾದು ಹೋಗುವ ಅನೇಕ ವಾಹನ ಸವಾರರು ಅರಿಯದೆ ನೇರವಾಗಿ ನುಗ್ಗುತ್ತಿದ್ದು ಅನೇಕ ಅಪಘಾತಗಳು ಸಂಭವಿಸಿವೆ. ರಾಜ್ಯ ಹೆದ್ದಾರಿಯಲ್ಲಿ ವೇಗ ಮಿತಿ ನಿಯಂತ್ರಕಗಳು ಹಂಪ್ಸ್ ಹಾಗೂ ಜೀಬ್ರ ಕ್ರಾಸಿಂಗ್,ಸೂಕ್ತ ನಾಮಲಕಗಳು ಇಲ್ಲದಿರುವುದು ಕಾರಣ ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ

ಈ ಸರ್ಕಲ್ ಸದಾ ಜನಜಂಗೂಳಿಯಿಂದ ಕೂಡಿದ್ದು ಸೋಮವಾರ, ಬುಧವಾರ, ಶುಕ್ರವಾರ ಸ್ಥಳೀಯರಿಗೂ ಪ್ರವಾಸಿಗರಿಗೂ ಮಾತಿನ ಚಕಮಕಿಗಳು ಸಾಮಾನ್ಯವಾಗಿದೆ. ಅದಲ್ಲದೆ ಯಾವುದೇ ಸೂಚನಾ
ಫಲಕಗಳು ಸಹ ಇರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನಾದರೂ ಮುಂದಿನ ದಿನಗಳಲ್ಲಿ ಸಾವು ನೋವುಗಳು ಸಂಭವಿಸುವ ಮುನ್ನ ಇದಕ್ಕೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮಂಡಳಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಧ್ಯಕ್ಕೆ ಪರಿಸ್ಥಿತಿಗೆ ತಾತ್ಜಾಲಿಕವಾಗಿಯಾದರು ಬ್ಯಾರಿಕೆಡ್ ಇಟ್ಟು ಕ್ರಮ ಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಸರ್ಕಲ್ ಗೆ ಸಂಬಂಧಿಸಿದ ಸೂಚನ ಫಲಕ ಅಳವಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ : ಪುನೀತ್ ಕಡಿದಾಳು
