ಮೂಡಿಗೆರೆ: ಆರ್ಥಿಕ ನಷ್ಟ ಅನುಭವಿವುಸುತ್ತಿರುವ ರೈತರಿಗೆ ಕೂಡಲೆ ಬೆಳೆ ವಿಮೆ ಪರಿಹಾರ ನೀಡುವಂತೆ ರೈತ ಸಂಘದ ಸದಸ್ಯರು ತಹಶೀಲ್ದಾರ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ದಯಕರ್ ಬಿ.ಸಿ. ವಿಮಾ ಕಂಪನಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ವಿಮೆ ಪಾವತಿಸದೆ ವಂಚಿಸುತ್ತಿದೆ.
ರೈತರು ಕೃಷಿಗೆ ಮತ್ತು ವಿಮೆಗೆ ಹಾಕಿದ ಬಂಡವಾಳ ಸಹ ಕೈಗೆಟುಕದಂತಾಗಿದೆ ಕಾಣದ ಕೈಗಳ ಚಳಕದಿಂದಾಗಿ ಅವ್ಯವಹಾರ ನಡೆಸಿರಬಹುದಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಈ ಕುರಿತು ಸಮಗ್ರ ತನಿಖೆಯಾಗಬೇಕು. ಈ ಕೂಡಲೆ ಅತಿವೃಷ್ಠಿ ಘೋಷಣೆಯಾದ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಆಗಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಆರ್ಥಿಕ ನಷ್ಟ ಭರಿಸಲು ಸರ್ಕಾರ ಮುಂದಾಗಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು
ತಾಲೂಕು ಅಧ್ಯಕ್ಷ ರಾಜ್ಯದಲ್ಲಿ ಹಲವು ಮಳೆ ಮಾಪನ ಹಾಳಾಗಿದ್ದು ಅವುಗಳ ದುರಸ್ತಿ ಕಾರ್ಯ ಆಗಬೇಕು,ವಿಮೆ ನೀಡಲು ಕಿಲೋಮೀಟರ್ ಗಟ್ಟಲೆ ದೂರ ಇರುವ ಗ್ರಾ. ಪಂಚಾಯಿತಿ ವ್ಯಾಪ್ತಿಯ ಕಡಿಮೆ ಮಳೆ ಪ್ರದೇಶ ಪರಿಗಣಿಸಿದ್ದರಿಂದ ಹಾಗೂ ಮಾರ್ಗಸೂಚಿ ಬದಲಾವಣೆ ರೈತರಿಗೆ ವಿಮೆ ಹಣ ದಕ್ಕಲು ಸಾಧ್ಯವಾಗಿಲ್ಲ ಎಂದರು
ಅತಿಯಾದ ಮಳೆಯಿಂದಾಗಿ ವಾರ್ಷಿಕ ಬೆಳೆಗಳು ನಾಶವಾಗಿದೆ ಆರ್ಥಿಕ ನಷ್ಟ ಅನುಭವಿಸುತ್ತಿರುವ ರೈತರು ವಿಮೆ ಕಟ್ಟಲು ಸಾಧ್ಯವಾಗಿಲ್ಲ ಅಂತಹ ರೈತರನ್ನು ಪರಿಗಣಿಸಿ ಸರ್ಕಾರ ಅನುದಾನ ನೀಡಬೇಕು ಎಂದರು
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ರಮೇಶ ಗೌಡ ಡಿ ಎಸ್, ರೈತ ಮುಖಂಡರಾದ ಪ್ರದೀಪ್ ಯು ಹೊಸಳ್ಳಿ, ವಾಸುದೇವ ಸತ್ತಿಗನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು
