ಮೂಡಿಗೆರೆ: ತಾಲೂಕಿನ ಅರಣ್ಯ ಇಲಾಖೆ ಸುಡು ಬಿಸಿಲಿನಲ್ಲಿ ಗಿಡಗಳ ಅಗ್ತೆ (ಸಾಯ್ಲ್ ವರ್ಕ್) ಮಾಡಿಸ್ತಾ ಇರೋದು ಪರಿಸರ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಂತೂರು, ಕಣಚೂರು, ಊರುಬಗೆ, ತತ್ಕೊಳದಲ್ಲಿ ಮಳೆಗಾಲದಲ್ಲಿ ಕಾಡುಜಾತಿ ಗಿಡಗಳಿಗೆ ಮಾಡಬೇಕಾದ ಅಗ್ತೆಯನ್ನ ಈಗ ಮಾಡಿಸ್ತಾ ಇರೋದು ಕಾಟಾಚಾರದ ಕೆಲಸ ಅಂತಾ ಗರಂ ಆಗಿದ್ದಾರೆ.
ಈ ಬಿಸಿಲಿನಲ್ಲಿ ಗಿಡಗಳಿಗೆ ಅಗ್ತೆ ಮಾಡಿಸಿದ್ರೆ , ಗಿಡಗಳು ನೀರಿಲ್ಲದೇ ಸುಟ್ಟು ಹೋಗುತ್ತದೆ, ಸಾಮಾನ್ಯ ಪ್ರಜ್ಳೆಯೂ ಇಲ್ಲದೇ ಈ ರೀತಿ ಈ ಸಮಯದಲ್ಲಿ ಗಿಡಗಳ ಅಗ್ತೆ ಮಾಡಿಸೋದಕ್ಕೆ ಮುಂದಾಗಿರೋದೇ ಮೂರ್ಖತನದ ಪರಮಾವಧಿ ಎಂದು ಕಿಡಿ ಕಾರಿದ್ದಾರೆ.
ಈಗ ಮಾಡ್ತಿರೋದು ಕಳೆದ ವರ್ಷದ ಆಗಸ್ಟ್ ನಲ್ಲಿ ಮಾಡಬೇಕಾಗಿದ್ದ ಕೆಲಸ, ಆಗ ಕೆಲಸ ಮಾಡಿದ್ದೇವೆಂದು 20 ಲಕ್ಷಕ್ಕೂ ಅಧಿಕ ಬಿಲ್ ಅನ್ನ ಆಗಲೇ ಗುಳುಂ ಮಾಡಿ ಆಗಿದೆ. ಈಗ ಕಣ್ಣೊರೆಸಲು ಈ ರೀತಿಯ ಕೆಲಸ ಆಗ್ತಿದೆ ಅಂತಾ ಆರೋಪಿಸಿರೋ ಸಾರ್ವಜನಿಕರು, ಕೂಡಲೇ ಡಿಎಫ್ ಓ ಈ ಬಗ್ಗೆ ಗಮನ ವಹಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹಿಸಿದ್ದಾರೆ.
