ಮೂಡಿಗೆರೆ : ಹಾಸನ ನಗರದ ಪ್ರಖ್ಯಾತ ವಾಸನ್ ಕಣ್ಣಿನ ಆಸ್ಪತ್ರೆ ಮತ್ತು ಇಂಡಿಯಾನ ಮಲ್ಟಿ ಹಾರ್ಟ್ ಸ್ಪೆಷಲಿಸ್ಟ್ ವತಿಯಿಂದ ಜೆಸಿಐ ಜನ್ನಾಪುರ ಸಮೃದ್ದಿ ಸಹಯೋಗದಲ್ಲಿ ತಾಲ್ಲೂಕಿನ ಜನ್ನಾಪುರ ಗಣಪತಿ ದೇವಾಲಯದ ಆವರಣದದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಆಯೋಜನೆ ಮಾಡಲಾಯಿತು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರದೀಪ್ ಹೊಸಪುರ ನಮಗೆ ಎಲ್ಲದಕ್ಕಿಂತಲೂ ಮುಖ್ಯವಾದುದು ಆರೋಗ್ಯ. ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನಾವು ಜಾಗೃತಿ ಮಾಡಬೇಕು. ಇದೇ ಕಾರಣದಿಂದ ಪ್ರತಿ ಊರಿನಲ್ಲಿ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.
ಹಾಸನದ ವಾಸನ್ ಕಣ್ಣಿನ ಆಸ್ಪತ್ರೆ ಹಾಗೂ ಇಂಡಿಯಾನ ಮಲ್ಟಿ ಆಸ್ಪತ್ರೆಯ ವೈದ್ಯರಾದ
ವಿಶ್ವಾಸ್, ಚೈತ್ರ,ನಯೀಮ್ ಸಿದ್ದಿಕ್,ದರ್ಶನ್,ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.
ಜನ್ನಾಪುರ ವ್ಯಾಪ್ತಿಯ ವಿವಿಧ ಹಳ್ಳಿಗಳ ಸುಮಾರು 150 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಜನ್ನಾಪುರ ಸಮೃದ್ಧಿ ಉಪಾಧ್ಯಕ್ಷರುಗಳಾದ ವೀರೇಂದ್ರ ಪಟೇಲ್, ಜಗತ್ ಗೌಡ , ನಿಕ್ಷೇಪ್ ಮರಬೈಲು, ಗ್ರಾಮ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರತಿಮಾ, ಕಾರ್ಯದರ್ಶಿ ಚರಣ್ ಗೌಡ ಮರಬೈಲು, ಭರತ್ ನಿಡಗೋಡು, ಪ್ರಹ್ಲಾದ್, ತೇಜಸ್, ವಿನಯ್, ಪ್ರಸಾದ್, ಸಂದೀಪ್ ಜೇನುಬೈಲು ನಿತಿನ್, ಕೀರ್ತನ್ ಲಿಖಿತ್ ಸೇರಿದಂತೆ ಅನೇಕರು ಇದ್ದರು.

