Saturday, February 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಡಿಜೆ ನಿಷೇಧದ ನಡುವೆಯೂ ಅದ್ದೂರಿ ಶೋಭಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ!

ಮೂಡಿಗೆರೆ: ಡಿಜೆ ನಿಷೇಧದ ನಡುವೆಯೂ ಅದ್ದೂರಿ ಶೋಭಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ!

ಮೂಡಿಗೆರೆ : ನಗರದ ಅಡ್ಯಾಂತಯ ರಂಗಮಂದಿರಲ್ಲಿ ಹಿಂದೂ ಮಹಾ ಗಣಪತಿ ಸಮಿತಿ ವತಿಯಿಂದ 12ನೇ ವರ್ಷ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಇಂದು ವಿಸರ್ಜನೆಯ ಅಂಗವಾಗಿ ಬೃಹತ್ ಶೋಭಾಯಾತ್ರೆ ಸಡಗರ ಸಂಭ್ರಮದಿಂದ ನಡೆಯಿತು.

ಗಣೇಶ ಮಂಟಪದಲ್ಲಿ ಬೆಳಗ್ಗೆ ಗಣಪತಿಗೆ ಪೂಜೆ, ಮಹಾಮಂಗಳಾರತಿ ನಡೆಯಿತು, ಮಧ್ಯಾಹ್ನ 1 ಘಂಟೆಗೆ ಆರಂಭವಾದ ಶೋಭಾ ಯಾತ್ರೆ ನಗರದ ಮೇಘಲಪೇಟೆ,ರೋಟರಿ ವೃತ್ತ ಹಾಯ್ದು ಪೊಲೀಸ್ ಠಾಣೆಯ ರಸ್ತೆ ಮಹಾತ್ಮ ಗಾಂಧಿ ರಸ್ತೆ ಮೂಲಕ ಹಳೇ ಮೂಡಿಗೆರೆ ಗಣಪತಿ ದೇವಸ್ಥಾನ ಬಳಿ ಸಾಗಿ ಕಡೂರ್ ಮಂಗಳೂರು ರಸ್ತೆ ಉದ್ದಕ್ಕೂ ರಸ್ತೆ ಮೂಲಕ ಹ್ಯಾಂಡ್ ಪೋಸ್ಟ್ ವೃತ್ತದವರೆಗೆ ಮೆರವಣಿಗೆ ತೆರಳಿ ಬೀಜುವಳ್ಳಿ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಹಿಂದೂ ಮಹಾ ಸಭಾ ಗಣಪತಿ ಸಮಿತಿ ಅಧ್ಯಕ್ಷ ಪುಟ್ಟಣ್ಣ ಪಟ್ಟದ್ದೂರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದ್ದೂ,ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು ವೈರಿಗಳಿಗೆ ತಿರುಗೇಟು ನೀಡಬೇಕಾಗಿದೆ ಎಂದರು.

ಹಾಗೆ ಕಾರ್ಯಕ್ರಮಕ್ಕೆ ಯಾವುದೇ ಹಣ ಪಡೆಯದೇ ಸಂಬಳ ರೂಪದಲ್ಲಿ ನಾಸಿಕ್ ಬಡಿಯಲು ಬಂದಂತ ಯುವಕರನ್ನು ಪ್ರಶಂಸಿದರು.ಶೋಭಾಯಾತ್ರೆಯಲ್ಲಿ ಗಣಪನಿಗೆ ಜೈ ಘೋಷ ಹಾಕುತ್ತ ವಿವಿಧ ಜಿಲ್ಲೆಯ ಸಾಂಸ್ಕೃತಿಕ ಯುವ ಸಂಘದಿಂದ ದೊಡ್ಡಾಟ ರಂಜಿಸಿತು.

ಕಲಾ ತಂಡದ ವಿಶೇಷ ಡೊಳ್ಳು ವಾದ್ಯ ಎಲ್ಲಾರನ್ನು ರಂಜಿಸಿತು. ನಾಗವೇಷಧಾರಿಗಳ ಕುಣಿತ ನೋಡುಗರು ಕಣ್ಣರಳಿಸಿ ನೋಡುವಂತೆ ಮೋಡಿ ಮಾಡಿದರು. ಜಾನಪದ ಕುಣಿತ ಅಲ್ಲದೆ ಹುಲಿ ಕುಣಿತ ಕುಣಿತ ನೋಡುಗರನ್ನು ಕಣ್ಣು ತಂಪಾಗಿಸಿತು. ಚಂಡಿ ಮೇಳ ಅಪರೂಪವಾಗಿ ಚುಟುಕು ನೀಡಿತು.ಹಲವು ತಂಡದಿಂದ ಕೋಲಾಟಸದ್ದು ಮಾಡಿತು. ಕುಣಿತಗಳು ಪ್ರೇಕ್ಷಕರನ್ನು ರಂಜಿಸಿದವು.

ಅದರ ಜೊತೆ ಬೊಂಬೆ ಕುಣಿತ ಇನ್ನಿತರೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು.ಆಂಜನೇಯ ಸ್ತಬ್ದ ಚಿತ್ರ ಮೆರವಣಿಗೆಗೆ ಮೆರಗು ನೀಡಿತು. ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿಯುತ್ತಾ ಸಾಗಿದರು.

ಮೆರವಣಿಗೆ ಸಮಯದಲ್ಲಿ ಪ್ತಮುಖ ಬೀದಿಗಳಲ್ಲಿ ಮಾತೆಯರು ಭಗವಂತನಿಗೆ ಪುಷ್ಪರ್ಚನೆ ಸಲ್ಲಿಸಿ ರಂಗೋಲಿ ಹಾಕಿ ಆರತಿ ಎತ್ತಿ ಈಡುಗಾಯಿ ಒಡೆದು ಭಗವಂತ ಕೃಪೆಗೆ ಪಾತ್ರರಾಗಿ ಪುನೀತಾರಾದರೂ.

ಸುಮಾರು 15000 ಕ್ಕೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಈ ಬಾರಿ ಡಿಜೆ ನಿಷೇದ ಯುವ ಸಮೂಹಕ್ಕೆ ನೋವುಂಟು ಮಾಡಿದೆ 250 ಕ್ಕೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಶಾಸಕಿ ನಯನ ಮೋಟಮ್ಮ… ಮಾಜಿ ಶಾಸಕ ಬಿ ಬಿ. ನಿಂಗಯ್ಯ. ಎಂ ಪಿ. ಕುಮಾರಸ್ವಾಮಿ.. ಬಿಜೆಪಿ ಮುಖಂಡರ ದೀಪಕ್ ದೊಡ್ಡಯ್ಯ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು ,ಕಾರ್ಯಕರ್ತರು. ಸೇರಿದಂತೆ ವಿಶ್ವ ಹಿಂದೂ ಪರಿಷದ್ ಭಜರಂಗದಳ,ಹಿಂದೂ ಪರ ಸಂಘಟನೆಗಳು ಸೇರಿದಂತೆ ತಾಲ್ಲೂಕಿನ ಹಳ್ಳಿ ಹಳ್ಳಿ ಭಾಗದ ಜನತೆ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರೂ..

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!