Tuesday, July 14, 2026
Homeಕ್ರೈಮ್ಹಾಸನ:  ಕ್ಷುಲ್ಲಕ ಕಾರಣ:ದಂಪತಿಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಶಾಸಕರ ಬಲಗೈ ಬಂಟನ ಪುತ್ರ

ಹಾಸನ:  ಕ್ಷುಲ್ಲಕ ಕಾರಣ:ದಂಪತಿಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಶಾಸಕರ ಬಲಗೈ ಬಂಟನ ಪುತ್ರ

Telegram Group
Join Now

ಹಾಸನ: ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ಮೇಲೆ ಮನಸ್ಸೋಯಿಚ್ಛೆ ಹಲ್ಲೆ ನಡೆಸಿ ಶಾಸಕ ಕೆ.ಎಂ ಶಿವಲಿಂಗೇಗೌಡರ ಬಲಗೈ ಬಂಟನ ಪುತ್ರ ಸೂಫಿಯಾನ್ ಸಮಿವುಲ್ಲಾ ಕ್ರೌರ್ಯ ಮೆರೆದಿರುವ ಘಟನೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.

ದೇವಸ್ಥಾನಕ್ಕೆ ತೆರಳಿ ವಾಪಸ್‌ ಬರುತ್ತಿದ್ದ ದಂಪತಿಯೊಂದಿಗೆ ಸಣ್ಣ ವಿಚಾರಕ್ಕೆ ಕಿರಿಕ್‌ ತೆಗೆದು ಹಲ್ಲೆ ನಡೆದ್ದಾನೆ. ಕೈಮುಗಿದು ಬೇಡಿಕೊಂಡರೂ ಬಿಡದೇ ತನ್ನ ಪುಂಡರ ಗ್ಯಾಂಗ್‌ ಕರೆಸಿ ರಕ್ತ ಬರುವಂತೆ ಥಳಿಸಿದ್ದಾನೆ. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ದಂಪತಿಗಳಿಬ್ಬರು ಅರಸೀಕೆರೆ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಲು ಬಂದಿದ್ದರು. ರಥೋತ್ಸವ, ದೇವರ ಪೂಜೆ ಮುಗಿಸಿಕೊಂಡು ವಾಪಸ್‌ ತೆರಳುತ್ತಿದ್ದರು. ಈ ವೇಳೆ ತನ್ನ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಸಮಿವುಲ್ಲಾ ಅರಸೀಕೆರೆ ಪಟ್ಟಣದ ಎಪಿಎಂಸಿ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್‌ಗೆ ಟಚ್ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments