Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಖಾಸಗಿ ಜಾಗದಲ್ಲಿ ಕಸದ ರಾಶಿ: ತೆರವಿಗೆ ಹ್ಯಾಂಡ್ ಪೋಸ್ಟ್ ನಿವಾಸಿಗಳ ಒತ್ತಾಯ

ಮೂಡಿಗೆರೆ: ಖಾಸಗಿ ಜಾಗದಲ್ಲಿ ಕಸದ ರಾಶಿ: ತೆರವಿಗೆ ಹ್ಯಾಂಡ್ ಪೋಸ್ಟ್ ನಿವಾಸಿಗಳ ಒತ್ತಾಯ

ಮೂಡಿಗೆರೆ: ಖಾಸಗಿ ಜಾಗದಲ್ಲಿ ಕಸದ ರಾಶಿ ಹ್ಯಾಂಡ್ ಪೋಸ್ಟ್ ಸ್ವಚ್ಛತೆ ವೈಫಲ್ಯ
ನಗರದಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ತೋರದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಅಂಗಡಿ ಮುಂಗಟ್ಟು ಮಾಲೀಕರು ತಿಳಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಹಲವೆಡೆ ಕಸದ ರಾಶಿಗಳು ಕಂಡುಬರುತ್ತಿವೆ. ಇಲ್ಲಿನ ನಿವಾಸಿಗಳು ತ್ಯಾಜ್ಯ ಬಿಸಾಡುತ್ತಿದ್ದಾರೆ. ಈ ಬಗ್ಗೆ ಖಾಸಗಿ ಜಾಗದ ಮಾಲೀಕರಿಗೆ ತಿಳಿಸಿದ್ದರು ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದ್ದಾರೆ ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಕಿಡಿ ಕಾರಿದ್ದಾರೆ.

ಹಾಗೆ ನಗರದ ಹಲವೆಡೆ ತ್ಯಾಜ್ಯದ ರಾಶಿಗಳು ಮತ್ತು ಬಹಿರಂಗ ತ್ಯಾಜ್ಯ ವಿಲೇವಾರಿ ತಾಣಗಳು ಕಾಣಸಿಗುತ್ತಿವೆ.ಮನೆಯ ತ್ಯಾಜ್ಯವನ್ನು ಇಲ್ಲಿ ಬಿಸಾಕುತ್ತಿದ್ದೂ ಸಣ್ಣ ತ್ಯಾಜ್ಯದ ಗುಡ್ಡೆಗಳು ಈಗ ಸಾಮಾನ್ಯ ಸಂಗ್ರಹಣಾ ಕೇಂದ್ರಗಳಾಗಿ ಮಾರ್ಪಡುತ್ತಿದ್ದೂ ಬೀದಿ ನಾಯಿಗಳು ಅದನ್ನು ಹರಡುತ್ತವೆ. ಇನ್ನು, ತ್ಯಾಜ್ಯ ದಿಂದಾಗಿ ಬರುವ ದುರ್ವಾಸನೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!