Saturday, March 28, 2026
Homeಜಿಲ್ಲಾಸುದ್ದಿಮೂಡಿಗೆರೆ: ಹಳ್ಳಿಕಪ್ ಕ್ರಿಕೆಟ್ ಟೂರ್ನಿ: ಸುರಕ್ಷಿತ್ ಕುಂಬರಡಿ ಮಾಲೀಕತ್ವದ ತಂಡಕ್ಕೆ ಬಹುಮಾನ

ಮೂಡಿಗೆರೆ: ಹಳ್ಳಿಕಪ್ ಕ್ರಿಕೆಟ್ ಟೂರ್ನಿ: ಸುರಕ್ಷಿತ್ ಕುಂಬರಡಿ ಮಾಲೀಕತ್ವದ ತಂಡಕ್ಕೆ ಬಹುಮಾನ

ಮೂಡಿಗೆರೆ: ಹಳ್ಳಿಕಪ್ 2025 ಕ್ರಿಕೆಟ್ ಪಂದ್ಯಾವಳಿಯನ್ನು ಹೊಸಕೆರೆ ಮೈದಾನದಲ್ಲಿ ದ್ವಿತೀಯ ವರ್ಷದ ಹಳ್ಳಿ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು ಹೊಸಕೆರೆ ಗ್ರಾಮದ ಪುಟಾಣಿಗಳು ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಭಾಗಿಯಾಗಿ ಫೈನಲ್ ಪಂದ್ಯದಲ್ಲಿ ಸುರಕ್ಷಿತ್ ಕುಂಬರಡಿ ಮಾಲೀಕತ್ವದ MC ಬಾಯ್ಸ್ ತಂಡ ಬಹುಮಾನ ಗಳಿಸಿತು.

ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಹಿರಿಯರು ವಿಜೇತ ತಂಡಗಳಿಗೆ‌ ಬಹುಮಾನ‌ ವಿತರಿಸಿದರು.

ಈ ಕ್ರೀಡಾಕೂಟದಲ್ಲಿ ಬ್ರಿಜೇಶ್ ಕೆಸವಳಲು, ಅಜಿತ್ ಕುಂಬರಡಿ, ಪುನೀತ್ ಪಠಾನ್, ಕಟ್ಟರ್ ಸದಾ, ಮೋಹನ್ ಬುಲ್ಲಿ ಉತ್ತಮ ಪ್ರದರ್ಶನ ತೋರಿ ಕ್ರೀಡಾಭಿಮಾನಿಗಳ ಮನ ಗೆದ್ದರು.

ಕ್ರೀಡಾಕೂಟವನ್ನು ಹೊಸಕೆರೆ ಸುದೀಪ್, ಅಶ್ವಥ್ ಹಾಗೂ ಗೆಳೆಯರ ಬಳಗ ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ಅಚ್ಚು ಕಟ್ಟಾಗಿ ಆಯೋಜಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!