Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ : ಉನ್ನತ ಶಿಕ್ಷಣ, ಸಾಂಸ್ಕೃತಿಕ ಬೆಳವಣಿಗೆಯಿಂದ ಸಂಸ್ಥೆ ಉನ್ನತಕ್ಕೇರಿದೆ : ನವಾಜ್ ಮನ್ನಾನಿ ಪನವೂರು

ಮೂಡಿಗೆರೆ : ಉನ್ನತ ಶಿಕ್ಷಣ, ಸಾಂಸ್ಕೃತಿಕ ಬೆಳವಣಿಗೆಯಿಂದ ಸಂಸ್ಥೆ ಉನ್ನತಕ್ಕೇರಿದೆ : ನವಾಜ್ ಮನ್ನಾನಿ ಪನವೂರು

ಮೂಡಿಗೆರೆ : ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಿಂದ ಶಿಕ್ಷಣ ಸಂಸ್ಥೆಗಳು ಮೇಲ್ಮಟ್ಟಕ್ಕೆ ಸಾಗಲು ಹಾದಿಯಾಗಿದೆ ಎಂದು ನವಾಜ್ ಮನ್ನಾನಿ ಪನವೂರು ಹೇಳಿದರು.

ಹೌದು .. ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯಾ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಶಿಕ್ಷಣ ನಮ್ಮ ಬದುಕಿಗೆ ಮುಖ್ಯ ಪಾತ್ರ ವಹಿಸುತ್ತದೆ. ಹಾಗೆ ನಾವು ಕಲಿತ ವಿದ್ಯಾ ಸಂಸ್ಥೆಗಳನ್ನು ಮರೆಯಬಾರದು.ಶಿಕ್ಷಣವು ಮಾನವನ ವ್ಯಕ್ತಿ ವಿಕಸನಕ್ಕೆ ಮುಖ್ಯ ವಾಹಿನಿಯಾಗಿ ಕೆಲಸ ಮಾಡುತ್ತದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಚುಂಗತರ ಉಸ್ತಾದ್ ನೆರವೇರಿಸಿ ಮಾತನಾಡಿ ಇಪ್ಪತ್ತೈದು ವರ್ಷಗಳ ಸಾಧನೆ ವಿದ್ಯಾರ್ಥಿಗಳ ಏಳಿಗೆಗೆ ಪಾಲಕರ ವಿಶ್ವಾಸಕ್ಕೆ ಮತ್ತು ಶಿಕ್ಷಕರ ತ್ಯಾಗಕ್ಕೆ ಸಾಕ್ಷಿಯಾಗಿದೆ ಎಂದರು.

ಇರ್ಷಾದ್ ದಾರಿನಿ ಸಲೀಂ ಅರ್ಷದ್ ಮಿತ್ತಬೈಲ್ ಮಾತನಾಡಿ’ ಶಿಕ್ಷಣವು ಬರೀ ಅಕ್ಷರ ಗುರಿಯಲ್ಲ,ಇದು ಮಾನವೀಯತೆ, ಶಿಸ್ತು ಮತ್ತು ಜವಾಬ್ದಾರಿತನವನ್ನು ರೂಪಿಸುವ ಮಹಾ ಪ್ರಕ್ರಿಯೆಯಾಗಿದೆ. ಸಮುದಾಯದ ಬೆಳವಣಿಗೆಗೆ ದೀಪದಂತೆ ದಾರಿ ತೋರಿಸುವುದು ಸಂಸ್ಥೆಯ ನೈಜ ಶಕ್ತಿಯಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ನಾಸೀರ್ ಹಾಜಿ ವಹಿಸಿದ್ದರು. ಹಾಗೆ ಝೈದ್ ಫೈಝಿ ಖಲಂಧರಿ ಸ್ವಾಗತಿಸಿ, ಸಿನಾನ್ ಉಸ್ತಾದ್ ವಂದಿಸಿದರು.

ಕಾರ್ಯಕ್ರಮದಲ್ಲಿ ಮೊಯ್ದು ಫೈಝಿ ಕೊಡಗು, ಶೈಕುನಾ ಉಸ್ಮಾನ್ ಫೈಝಿ ತೊಡಾರ್, ಸಲೀಂ ಅರ್ಷಾದಿ, ಸ್ಥಳೀಯ ಮುಖಂಡರಾದ ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ನಜೀರ್, ಉಮ್ಮರ್, ಎ.ಸಿ.ಅಯೂಬ್, ಆಸೀಫ್, ಮಜೀದ್ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!