Wednesday, August 12, 2026
Homeಬ್ರೇಕಿಂಗ್ ನ್ಯೂಸ್ಭೀಕರ ರಸ್ತೆ ಅಪಘಾತದಲ್ಲಿ ಐವರ ಸಜೀವ ದಹನ, ಎರಡು ಕಾರು ಭಸ್ಮ!

ಭೀಕರ ರಸ್ತೆ ಅಪಘಾತದಲ್ಲಿ ಐವರ ಸಜೀವ ದಹನ, ಎರಡು ಕಾರು ಭಸ್ಮ!

Telegram Group
Join Now

ಲಖನೌ: ಬಾರಾಬಂಕಿ ಜಿಲ್ಲೆಯ ಪೂರ್ವಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರದಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಬ್ಬ ಮಹಿಳೆ ಸೇರಿದಂತೆ ಐವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಈ ಭಿಕರ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಎರಡು ಕಾರುನಲ್ಲಿ ಒಟ್ಟು ಒಂಬತ್ತು ಜನರು ಪ್ರಯಾಣಿಸುತ್ತಿದ್ದರು. ಪೂರ್ವಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಡೀಹ್ ಗ್ರಾಮದ ಬಳಿ ನಿಂತಿದ್ದ ವ್ಯಾಗನಾರ್ (WagonR) ಕಾರಿಗೆ, ಹಿಂದಿನಿಂದ ವೇಗವಾಗಿ ಬಂದ ಬ್ರೀಝಾ (Brezza) ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವ್ಯಾಗನಾರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಎರಡೂ ವಾಹನಗಳು ಸುಟ್ಟು ಭಸ್ಮವಾಗಿವೆ. ಈ ದುರಂತದಲ್ಲಿ ಮಹಿಳೆ ಮತ್ತು ಯುವತಿ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಹೈದರ್‌ಗಢದ ಸಿಎಚ್‌ಸಿ (CHC) ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಎಕ್ಸ್‌ಪ್ರೆಸ್‌ವೇ ಮೇಲೆ ನಿಂತಿದ್ದ ವ್ಯಾಗನಾರ್ ಕಾರಿಗೆ ಹಿಂದಿನಿಂದ ಬಂದ ಬ್ರೀಝಾ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಾಗನಾರ್‌ನಲ್ಲಿ ಬೆಂಕಿ ಹೊತ್ತಿಕೊಂಡು ಎರಡೂ ವಾಹನಗಳು ಉರಿಯಲಾರಂಭಿಸಿದವು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (SP) ಅರ್ಪಿತ್ ವಿಜಯವರ್ಗೀಯ ಅವರು ಘಟನೆ ಕುರಿತು ಮಾಹಿತಿ ನೀಡಿದ್ದು, ಒಂದು ಕಾರು ಗಾಜಿಯಾಬಾದ್‌ಗೆ ಸಂಬಂಧಿಸಿದ್ದು, ಇನ್ನೊಂದು ದೆಹಲಿದ್ದಾಗಿದೆ ಎಂದು ತಿಳಿಸಿದ್ದಾರೆ. ಒಂದು ಕಾರಿನಲ್ಲಿದ್ದ ಕುಟುಂಬ (ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು) ನೀರು ಕುಡಿಯಲು ಕಾರನ್ನು ನಿಲ್ಲಿಸಿ ಹೊರಬಂದಾಗ, ಮತ್ತೊಂದು ವೇಗದ ಕಾರು ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೃತರಾದವರು ಗುಲಿಷ್ತಾ (49), ಸಮರೀನ್ (22), ಇಲ್ಮಾ ಖಾನ್ (12), ಇಶ್ಮಾ ಖಾನ್ (6), ಹಾಗೂ ಜಿಯಾನ್ (10) ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments