ಮೂಡಿಗೆರೆ: ತುಂಬಾ ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯಮಟ್ಟದ ಕ್ರೀಡಾಕೂಟಗಳು ಆಯೋಜನೆಗೊಂಡು ಯಶಸ್ವಿ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡಾಂಗಣದ ಅವ್ಯವಸ್ಥೆ ನೋಡಿದರೆ ತುಂಬಾ ಹೀನಾಯ ಪರಿಸ್ಥಿತಿಯಲ್ಲಿ ಕಂಡು ಬಂದಿದೆ.
ಹೌದು .. ಇತ್ತೀಚಿನ ದಿನಗಳಲ್ಲಿ ನಮ್ಮ ತಾಲೂಕು ಕ್ರೀಡಾಂಗಣವು ಅನೇಕ ಅನೈತಿಕ, ಕಾನೂನು ಬಾಹಿರ ಚಟುವಟಿಕೆಯಾಗಿ ಮಾರ್ಪಾಟ್ಟುಗೊಂಡಿದ್ದು ಹಾಗೆ ಪುಂಡ ಪೋಕರಿಗಳ ಅಡ್ಡವಾಗಿ ಪರಿವರ್ತನೆಗೊಂಡಿದೆ
ಇದು ಅನೇಕ ವರುಷಗಳಿಂದ ಹಲವಾರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಸಾಕ್ಷಿಯಾಗುತ್ತಿದ್ದು ನಮ್ಮ ತಾಲ್ಲೂಕು ಕ್ರೀಡಾಂಗಣದ ಸದ್ಯದ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿದೆ ಅಂದರೆ ತಪ್ಪಾಗಲಾರದು.
ಯಾವುದೇ ಮೂಲ ಸೌಕರ್ಯಗಳು ಇಲ್ಲದಾಗಿದ್ದು ಕ್ರೀಡಾಪಟುಗಳಿಗೆ ಸರಿಯಾದ ಶೌಚಾಲಯವಾಗಲಿ, ಕುಡಿಯುವ ನೀರಿನ ವ್ಯವಸ್ಥೆಗಳಾಗಲಿ ಹಾಗೆ ಸರಿಯಾದ ಟ್ರಾಕ್ ವ್ಯವಸ್ಥೆ ಕೂಡ ಇಲ್ಲದೆ ಪೂರ್ತಿಯಾಗಿ ಹದಗೆಟ್ಟು ಹೋಗಿದ್ದು ಆಟಗಾರರು ಆಡಲು ಯಾವುದೇ ಕನಿಷ್ಟ ಪಕ್ಷದ ವ್ಯವಸ್ಥೆ ಕೂಡ ಇಲ್ಲದೇ ಹೋಗಿದೆ.
ಇಲ್ಲಿ ರಾತ್ರಿ ಆದರೆ ಅನೇಕ ಕಾನೂನು ಬಾಹಿರ ಚಟುವಟಿಗೆಗಳು ನಡೆಯುವ ಸ್ಥಳವಾಗಿದೆ ಧೂಮಪಾನ ಮದ್ಯಪಾನ ಇನ್ನು ಹಲವು ಚಟುವಟಿಗೆಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿದೆಬಾಟಲಿಗಳು ಹೊಡೆದು ಕ್ರೀಡಾಂಗಣಕ್ಕೆ ಹಾಕುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಕ್ರೀಡಾಕೂಟ ನಡೆಸುವ ನೆಪದಲ್ಲಿ ಕ್ರೀಡಾಂಗಣದ ಮದ್ಯಭಾಗದಲ್ಲಿ ಗುಂಡಿ ತೋಡಿ 30-40 ಕಂಬಗಳನ್ನು ನೆಟ್ಟು ಕ್ರೀಡಾಂಗಣದ ಮೂಲ ರೂಪವನ್ನೇ ಬದಲಾಯಿಸಲಾಗಿದೆ
ಸದ್ಯದ ಪರಿಸ್ಥಿಯಲ್ಲಿ ಕ್ರೀಡಾಂಗಣವು ಕೃಷಿಗೆ ಯೋಗ್ಯ ಭೂಮಿಯಾಗಿದೆ ಯಾವುದೇ ಕ್ರೀಡೆ ನಡೆಸಲು ಯೋಗ್ಯವಲ್ಲದ ಮಟ್ಟಕ್ಕೆ ವಿರೂಪಗೊಂಡಿದೆ.ಹಾಗೆ ಅನೇಕ ವಯಸ್ಕರು ಕ್ರೀಡಾಪಟುಗಳು ಬೆಳಗ್ಗಿನ ವಿಹಾರಕ್ಕೆ ಇದೇ ಕ್ರೀಡಾಂಗಣಕ್ಕೆ ಅವಲಂಬಿತರಾಗಿದ್ದಾರೆ ಆದರೆ ನಡೆದಾಡಲು ಸಹ ಆಗದ ಪರಿಸ್ಥಿತಿ ಎದುರಾಗಿದ್ದು ಯಾವುದೇ ಒಂದು ಬದಿಯಲ್ಲಿ ಕೂಡ ವಿದ್ಯುತ್ ಲೈಟ್ ಗಳ ವ್ಯವಸ್ಥೆಯು ಇಲ್ಲದಾಗಿದೆ
ಈ ಕ್ರೀಡಾಂಗಣದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳು ಬಂದು ಹೋಗುತ್ತಾರೆ ಯಾರೂ ಕೂಡ ಕ್ರೀಡಾಂಗಣದ ಬಗ್ಗೆ ಗಮನ ಹರಿಸಲ್ಲಕೇವಲ ಭಾಷಣ ಮಾಡಿ ಹೋಗುತ್ತಾರೆ ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಕ್ರೀಡಾ ಇಲಾಖೆಯವರು ಮಾನ್ಯ ಶಾಸಕರು ಅಧಿಕಾರಿಗಳು ಬಂದು ಕ್ರೀಡಾಂಗಣದ ಅವ್ಯವಸ್ಥೆಗಳನ್ನು ಸರಿಪಡಿಸಿ ಮೂಲ ಸೌಕರ್ಯ ಒದಗಿಸಿ ನಮ್ಮ ತಾಲೂಕಿಗೆ ಉತ್ತಮ ದರ್ಜೆಯ ಸುಸಜ್ಜಿತವಾದ ಕ್ರೀಡಾಂಗಣವಾಗಿ ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ : ಪುನೀತ್ ಕಡಿದಾಳ್
