Sunday, August 9, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ದತ್ತಪೀಠದ ಮಾರ್ಗದಲ್ಲಿ ಭೂ ಕುಸಿತ: ಪೊಲೀಸರಿಂದ ಪರಿಶೀಲನೆ!

ಚಿಕ್ಕಮಗಳೂರು: ದತ್ತಪೀಠದ ಮಾರ್ಗದಲ್ಲಿ ಭೂ ಕುಸಿತ: ಪೊಲೀಸರಿಂದ ಪರಿಶೀಲನೆ!

Telegram Group
Join Now

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಈ ಬಾರೀ ಹೆಚ್ಚು ಮಳೆಯಾಗಿದ್ದ ಕಾರಣ ಇದರ ಪರಿಣಾಮವಾಗಿ ದತ್ತಪೀಠದ ಮಾರ್ಗದಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ.

ಮಳೆ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡು ಕಲ್ಲು ಮಣ್ಣುಗಳು ರಸ್ತೆ ಬದಿಗೆ ಜಾರಿ ಬಿದ್ದಿವೆ.ಈ ಕುರಿತು ಮಾಹಿತಿ ತಿಳಿದ ಕೂಡಲೇ ಚಿಕ್ಕಮಗಳುರು ಗ್ರಾಮಾಂತರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಅಗತ್ಯ ಕ್ರಮವನ್ನು ವಹಿಸಿದ್ದಾರೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದು ಆದರೆ ಈಗ ಯಾವುದೇ ಭಯವಿಲ್ಲದೇ ವಾಹನಗಳು ಓಡಾಟನಡೆಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments