Friday, April 10, 2026
Homeಕ್ರೈಮ್ಮೂಡಿಗೆರೆ: ಅಕ್ರಮ ಮರ ಸಾಗಣೆ ಬಯಲು: 1 ಲಕ್ಷ ಮೌಲ್ಯದ ಹಲಸಿನ ಮರದ ತುಂಡು ಜಪ್ತಿ,...

ಮೂಡಿಗೆರೆ: ಅಕ್ರಮ ಮರ ಸಾಗಣೆ ಬಯಲು: 1 ಲಕ್ಷ ಮೌಲ್ಯದ ಹಲಸಿನ ಮರದ ತುಂಡು ಜಪ್ತಿ, ಇಬ್ಬರು ಅರೆಸ್ಟ್!

ಮೂಡಿಗೆರೆ : ಪಟ್ಟಣದ ಸಮೀಪದ ಕೆ.ಎಂ. ರಸ್ತೆಯ ಸಿದ್ದಾರ್ಥ ವನ ಬಳಿ ಗುರುವಾರ ರಾತ್ರಿ ಸುಮಾರು 8 ಗಂಟೆಯ ವೇಳೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಲಸಿನ ಮರದ ತುಂಡುಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.

KA-46-6177 ಸಂಖ್ಯೆಯ ಬೊಲೆರೋ ಪಿಕಪ್ ವಾಹನದಲ್ಲಿ ಯಾವುದೇ ಪರ್ಮಿಟ್ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 45 ಅಡಿ ಹಲಸಿನ ಸೈಜುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಈ ಸಂಬಂಧ ಹಳೇ ಮೂಡಿಗೆರೆಯ ಶಿವಪ್ಪ ಬಿನ್ ಗೋವಿಂದಯ್ಯ (A1) ಹಾಗೂ ಗುತ್ತಿ ಗ್ರಾಮದ ವಿಕ್ರಮ್ ಜಿ.ಸಿ. ಬಿನ್ ಚಂದ್ರೇಗೌಡ (A2) ವಿರುದ್ಧ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ.

ಡಿಸಿಎಫ್ ರಮೇಶ್ ಬಾಬು ಹಾಗೂ ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಗೆ ಆರ್‌ಎಫ್‌ಒ ಮಂಜುನಾಥ್ ಜಿ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಅಶ್ವಥ್, ಬಗಲಿ, ಬೀಟ್ ಫಾರೆಸ್ಟರ್‌ಗಳಾದ ಪರಮೇಶ್, ಸುರೇಶ್, ವಾಚರ್ ಉದಯ್ ಹಾಗೂ ವಾಹನ ಚಾಲಕರಾದ ಸುಮಂತ್ ಮತ್ತು ನವರಾಜ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!