Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ : ವಾಹನಗಳಲ್ಲಿ ಹೆಚ್ಚಿದ ‌LED ಬಲ್ಪ್ ಬಳಕೆ: ಕ್ರಮ ಕೈಗೊಳ್ಳಲು ನೂತನ್ ಬೆಟ್ಟಗೆರೆ ಒತ್ತಾಯ

ಮೂಡಿಗೆರೆ : ವಾಹನಗಳಲ್ಲಿ ಹೆಚ್ಚಿದ ‌LED ಬಲ್ಪ್ ಬಳಕೆ: ಕ್ರಮ ಕೈಗೊಳ್ಳಲು ನೂತನ್ ಬೆಟ್ಟಗೆರೆ ಒತ್ತಾಯ

ಮೂಡಿಗೆರೆ: ವಾಹನಗಳಲ್ಲಿ LED ಪೋಕಸ್ ಬಲ್ಪ್ ಅಳವಡಿಸುವುದು ನಿಷೇಧವಿದ್ದರೂ ವಾಹನಗಳಲ್ಲಿ ಇಂತಹ ಬಲ್ಪ್ ಬಳಕೆದಾರರ ಸಂಖ್ಯೆ ಹೆಚ್ಚಿದ್ದು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ನೂತನ್ ಬೆಟ್ಟಗೆರೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನೂತನ್ ಬೆಟ್ಟಗೆರೆ, ರಾತ್ರಿ ವೇಳೆ ಪೋಕಸ್ ಬಲ್ಪ್ ಬಳಕೆಯಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದೂ ದ್ವಿ ಚಕ್ರ ವಾಹನ ಓಡಿಸುವರು ರಸ್ತೆ ಕಾಣದೆ ಗುಂಡಿಗಳಿಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಡಿಮ್ ಡಿಪ್ ಮಾಡದ ಸಂದರ್ಭದಲ್ಲಿ ಕಣ್ಣುಗಳು ಮಂಜಗಿ ರಸ್ತೆ ಬಿಟ್ಟು ಬೀಳುತ್ತಿದ್ದಾರೆ.

ಹೆಚ್ಚಿನದಾಗಿ ಐಶಾರಾಮಿ ಕಾರುಗಳಲ್ಲಿ ನಿಷೇಧಿತ ಬಲ್ಪ್ ಗಳ ಬಳಕೆ ಹೆಚ್ಚಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವರದಿ :ಪುನೀತ್ ಕಡಿದಾಳ್ 

9483711948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!