ಮೂಡಿಗೆರೆ ಹಾಗೂ ಚಿಕ್ಕಮಗಳೂರು ಮಾರ್ಗ ಮಧ್ಯೆ ಹಾಂದಿ ಗ್ರಾಮದಲ್ಲಿ ವೇಗದೂತ ಬಸ್ ನಿಲುಗಡೆಗೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಇಂದ್ರವಳ್ಳಿ ಒತ್ತಾಯಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಅವರು, ಹಾಂದಿ ಗ್ರಾಮದಲ್ಲಿ ವೇಗದೂತ ಬಸ್ ಗಳನ್ನ ನಿಲ್ಲಿಸುವುದಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜು ತಲುಪಲು ತೊಂದರೆ ಆಗುತ್ತಿದೆ
ಸುಮಾರು ನಾಲ್ಕು ಗ್ರಾಮ ಪಂಚಾಯಿತಿಯ 25 ಗ್ರಾಮಗಳ ಸಾರ್ವಜನಿಕರಿಗೆ ಕೆಲಸದ ನಿಮಿತ್ತ ಚಿಕ್ಕಮಗಳೂರು ನಗರಕ್ಕೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ.
ಅದಲ್ಲದೆ ರಾತ್ರಿ ಹಾಗೂ ಹಗಲು ಮೂಡಿಗೆರೆ ತಲುಪಿದ ನಂತರ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದೆ ವೇಗದೂತ ಬಸ್ ನಿಲುಗಡೆ ಇಲ್ಲದೆ ಇರುವುದರಿಂದ ಅಧಿಕ ಹಣ ವ್ಯಯಿಸಿ ಬಾಡಿಗೆ ವಾಹನ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಇದನ್ನು ಗಮನದಲ್ಲಿಟ್ಟು ಈಶಾನ್ಯ ಸಾರಿಗೆ ಬಸ್ ಸೇರಿದಂತೆ ಆನೇಕ ಸಾರಿಗೆ ಸಂಸ್ಥೆಯ ಬಸ್ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸಂಬಂಧ ಪಟ್ಟ ಇಲಾಖೆ ಹಾಗೂ ಸಾರಿಗೆ ಸಚಿವರು ಈ ಕೂಡಲೆ ಎಲ್ಲ ವೇಗದೂತ ಬಸ್ ಗಳನ್ನು ಹಾಂದಿ ಗ್ರಾಮದಲ್ಲಿ ನಿಲ್ಲಿಸಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ
