Tuesday, August 11, 2026
Homeಕ್ರೈಮ್ಬೇಲೂರು: ಅರೇಹಳ್ಳಿಯಲ್ಲಿ ಕಾಫಿ ಕಳ್ಳತನ: ತಡೆದ ಮಾಲಿಕನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

ಬೇಲೂರು: ಅರೇಹಳ್ಳಿಯಲ್ಲಿ ಕಾಫಿ ಕಳ್ಳತನ: ತಡೆದ ಮಾಲಿಕನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

Telegram Group
Join Now

ಭಾನುವಾರ ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ ಗುಂಪು ಸುಮಾರು 2 ಲಕ್ಷ ಮೌಲ್ಯದ ಕಾಫಿಯನ್ನು ಕಳುವು ಮಾಡಿದ್ದರು ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಇದಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಚುರುಕುಗೊಳಿಸಿದ್ದರು ಇವುಗಳ ನಡುವೆ ಇಂದು ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವವರು ಕಾರಿನಿಂದ ಹೊರಗೆ ಇಳಿದು ಬರಲು ಯತ್ನಿಸಿದ್ದಾರೆ ಆಗ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100 ಕೆಜಿ ಗಳಷ್ಟು ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಪಿ ಬಸವರಾಜ್ ಗ್ರಾಮದ ಮುಖಂಡ ಅಮಿತ್ ಶೆಟ್ಟಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸುವ ಮೂಲಕ ಇಂತಹ ಪ್ರಕರಣಗಳು ನಮ್ಮ ಬಾಗದಲ್ಲಿ ಮತ್ತೆಂದಿಗೂ ಮರುಕಳಿಸಬಾರದು, ಮೂರ್ನಾಲ್ಕು ದಿನಗಳ ಹಿಂದೆ ಅದೇ ಸ್ಥಳದಲ್ಲಿ ಕಾಫಿ ಕಳವು ನಡೆದು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿ ಮತ್ತೆ ಅದಕ್ಕಿಂತಲೂ ಕ್ರೌರ್ಯ ಮನಸ್ಸಿನಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ ಎಂದರೆ ಅದು ಯಾರ ವೈಫಲ್ಯ ಎಂದು ಪ್ರಶ್ನಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.ಹಾಗು ಶ್ವಾನ ದಳ ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments