Saturday, June 27, 2026
Homeಕ್ರೈಮ್ಚಿಕ್ಕಮಗಳೂರು:‌ ಸಖರಾಯಪಟ್ಟಣದಲ್ಲಿ ಗಣೇಶ್ ಹತ್ಯೆ ಕೇಸ್: ತಮಿಳುನಾಡಿನಲ್ಲಿ 6 ಆರೋಪಿಗಳ ಬಂಧನ!

ಚಿಕ್ಕಮಗಳೂರು:‌ ಸಖರಾಯಪಟ್ಟಣದಲ್ಲಿ ಗಣೇಶ್ ಹತ್ಯೆ ಕೇಸ್: ತಮಿಳುನಾಡಿನಲ್ಲಿ 6 ಆರೋಪಿಗಳ ಬಂಧನ!

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿಯನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಎ2 ನಿತಿನ್, ಎ4 ದರ್ಶನ್, ಎ5 ಅಜಯ್ ಸೇರಿದಂತೆ ದರ್ಶನ್ ನಾಯ್ಕ್, ಯೋಗೇಶ್, ಫೈಸಲ್ ಎಂದು ಗುರುತಿಸಲಾಗಿದೆ. ಡಿ.5ರ ರಾತ್ರಿ ಸಖರಾಯಪಟ್ಟಣದಲ್ಲಿ ಗಣೇಶ್ ಹತ್ಯೆ ನಡೆದಿತ್ತು. ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಗಣೇಶ್ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೂ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿರುವ ಎ1 ಸಂಜಯ್ ಎ3 ನಾಗಭೂಷಣ್, ಎ6 ಮಿಥುನ್ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments