Tuesday, February 10, 2026
Homeಆಧ್ಯಾತ್ಮಮೂಡಿಗೆರೆ: ಕಡಿದಾಳು ಸೋಮಲಿಂಗೇಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ

ಮೂಡಿಗೆರೆ: ಕಡಿದಾಳು ಸೋಮಲಿಂಗೇಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ

ಮೂಡಿಗೆರೆ: ತಾಲೂಕಿನ ಕಡಿದಾಳು ಗ್ರಾಮದ ಸೋಮಲಿಂಗೇಶ್ವರ ದೇವಾಲಯದಲ್ಲಿ ಭಕ್ತಿ ಪೂರ್ವಕವಾಗಿ ಕಾರ್ತಿಕ ಪೂಜೆ ನೆರವೇರಿಸಲಾಯಿತು.

ಕಾರ್ತಿಕ ಪೂಜೆ ಎಂದರೆ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವೆಂಬರ್ ತಿಂಗಳಲ್ಲಿ) ಭಗವಾನ್ ವಿಷ್ಣು ಮತ್ತು ಶಿವನಿಗೆ ಸಲ್ಲಿಸುವ ಪೂಜಾ ವಿಧಾನವಾಗಿದೆ

ಈ ಪೂಜೆಯಲ್ಲಿ ಮುಖ್ಯವಾಗಿ ಬೆಳಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು, ತುಪ್ಪದ ದೀಪ ಬೆಳಗುವುದು, ಕಾರ್ತಿಕ ಪುರಾಣವನ್ನು ಪಠಿಸುವುದು ಮತ್ತು ದಾನ-ಧರ್ಮ ಮಾಡುವುದು ಇವುಗಳನ್ನು ಒಳಗೊಂಡಿದೆ.

ಈ ಮಾಸದಲ್ಲಿ ‘ಕಾರ್ತಿಕ ಪೂರ್ಣಿಮೆ’ಯು ಒಂದು ದೊಡ್ಡ ಹಬ್ಬವಾಗಿದ್ದು, ಸತ್ಯನಾರಾಯಣ ಪೂಜೆ ಮತ್ತು ದೀಪದಾನವನ್ನು ಮಾಡಲಾಗುತ್ತದೆ.

ಹಿಂದೂ ಪಂಚಾಂಗದಲ್ಲಿ ಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರ ತಿಂಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ದೀಪಾವಳಿಯ ನಂತರದ ದಿನದಲ್ಲಿ ಪ್ರಾರಂಭವಾಗುವ ಕಾರ್ತಿಕ ಮಾಸ ದೇವರ ಆರಾಧನೆಗೆ ಸೂಕ್ತವಾದ ಕಾಲ ಎಂದು ಹೇಳಲಾಗುತ್ತದೆ.

ಚಳಿಗಾಲದ ಆರಂಭವನ್ನು ಸೂಚಿಸುವ ಈ ಮಾಸ ಹಿಂದೂ ಪಂಚಾಗದಲ್ಲಿ ಎಂಟನೇ ತಿಂಗಳು. ಅಕ್ಟೋಬರ್ ಅಂತ್ಯದಲ್ಲಿ ಹಾಗೂ ನವಂಬರ್ ಆರಂಭದ ಕಾಲ ಎಂದು ಹೇಳಲಾಗುತ್ತದೆ.

ಈ ಮಾಸದಲ್ಲಿ ಹಿಂದೂಗಳು ಶಿವನನ್ನು ಆರಾಧಿಸುತ್ತಾರೆ. ತಿಂಗಳ ಪೂರ್ತಿ ಆಚರಣೆ ಹಾಗೂ ಆರಾಧನೆಯಿಂದ ಕೂಡಿರುತ್ತದೆ.

ಈ ಸಮಯದಲ್ಲಿ ಶಿವನನ್ನು ಆರಾಧಿಸಿ ಪೂಜಿಸಿದರೆ ಬಹಳ ಶ್ರೇಷ್ಠವಾದದ್ದು ಎಂದು ಪರಿಗಣಿಸಲಾಗುವುದು.

ಶಿವ ಮತ್ತು ವಿಷ್ಣು ಇಬ್ಬರೂ ಮನುಕುಲದ ಒಳಿತಿಗೆ ಆಶೀರ್ವದಿಸುತ್ತಾರೆ.

ಹಾಗಾಗಿ ಈ ತಿಂಗಳಲ್ಲಿ ವಿಷ್ಣು ಹಾಗೂ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಅಂತೆಯೇ ಭಕ್ತರೂ ಸಹ ಶಿವ ಮತ್ತು ವಿಷ್ಣುವಿನ ದೇಗುಲಕ್ಕೆ ಹೋಗುತ್ತಾರೆ.

ಈ ತಿಂಗಳಲ್ಲಿ ಭಕ್ತರು “ಸೋಮವಾರ ವ್ರತ”ಎನ್ನುವ ಆಚರಣೆಯನ್ನು ಮಾಡುತ್ತಾರೆ. ಈ ಧಾರ್ಮಿಕ ಕ್ರಿಯೆಯ ಪ್ರಕಾರ ಶಿವನನ್ನು ಆರಾಧಿಸುತ್ತಾ ಸೋಮವಾರ ಉಪವಾಸವನ್ನು ಕೈಗೊಳ್ಳುತ್ತಾರೆ.

ವ್ರತವನ್ನು ಆಚರಿಸುವುದರಿಂದ ಭಕ್ತರು ಶಿವನ ಸಾನಿಧ್ಯಕ್ಕೆ ತೀರ್ಥಯಾತ್ರೆ ಕೈಗೊಂಡಷ್ಟೇ ಫಲ ಲಭಿಸುತ್ತದೆ ಎನ್ನುವ ನಂಬಿಕೆಯಿದೆ.

ಪರಮಾತ್ಮನಾದ ಶಿವನಿಗೆ ಅನೇಕ ಹೆಸರುಗಳಿವೆ. ಅದರಲ್ಲಿ ಸೋಮೇಶ್ವರ ಮತ್ತು ಸೋಮ್ ಎನ್ನುವ ಹೆಸರು ಬಹಳ ಪ್ರಸಿದ್ಧವಾದದ್ದು ಎಂದು ಹೇಳಲಾಗುತ್ತದೆ.

ಸೋಮವಾರ ವ್ರತದಲ್ಲಿ ಉಪವಾಸವನ್ನು ಕೈಗೊಂಡು, ಶಿವನನ್ನು ಜಪಿಸಲಾಗುವುದು. ಹಿಂದೂಗಳ ನಂಬಿಕೆಯ ಪ್ರಕಾರ ಕಾರ್ತಿಕ ಮಾಸದಲ್ಲಿ ಶಿವ ಪರಮಾತ್ಮನನ್ನು ಆರಾಧಿಸಿದರೆ ಶಿವನು ಆಶೀರ್ವದಿಸುತ್ತಾನೆ. ಇದರಿಂದ ನಾವು ಮಾಡಿದ ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎನ್ನುವ ಪವಿತ್ರ ನಂಬಿಕೆಯಿದೆ.

ಶಿವನ ದೇವಸ್ಥಾನದಲ್ಲಿ ಭಕ್ತರು ಹಣತೆಯನ್ನು ಹಚ್ಚಿ, ದೀಪವನ್ನು ಬೆಳಗಬೇಕು. ಆಗ ಅದೃಷ್ಟ ಮತ್ತು ಸಮೃದ್ಧತೆ ನಮಗೆ ಒಲಿಯುತ್ತದೆ ಎನ್ನಲಾಗುವುದು.

ಈ ತಿಂಗಳಲ್ಲಿ ಧಾನ-ಧರ್ಮವನ್ನು ಮಾಡಬೇಕು ಎಂದು ಗ್ರಾಮದ ಹಿರಿಯರು ತಿಳಿಸಿದರು.

ಭಕ್ತಾದಿಗಳು ಇತ್ತ್ತಾರ್ಥಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಹರಕೆ ಹೊತ್ತು. ಪ್ರಾರ್ಥಿಸಿ ದೇವರ ಕೃಪೆಗೆ ಪಾತ್ರರಾಗಿ ಧನ್ಯರಾದರೂ.
ಕಾರ್ತೀಕ ದೀಪೋತ್ಸವದ ಪೂಜೆ ಯನ್ನು ಅರ್ಚಕರಾದ ಸೂರ್ಯನಾರಯಣ್ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕೆ. ಕೆ ಮಲ್ಲೇಶ್ ಗೌಡ್ರು, ಸದಸ್ಯರಾದ ಉತ್ತಮ್, ಶ್ಯಾಮ್, ಸುಧಾಕರ್, ನವೀನ್ ಪಟೇಲ್, ಅಣ್ಣಪ್ಪಗೌಡ ಸೇರಿದಂತೆ ಗ್ರಾಮದ ಹಿರಿಯರಾದ ರವಿ ಕೆ. ಟಿ. ಲಕ್ಷ್ಮಣ್ ಗೌಡ ಮತ್ತು ಮಹಿಳೆಯರು ಮಕ್ಕಳು ಇದ್ದರು

ವರದಿ: ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!