Thursday, July 9, 2026
Homeಜಿಲ್ಲಾಸುದ್ದಿಮೂಡಿಗೆರೆ: ದೇವರಮನೆ ಸಾಗುವ ಅಪಾಯಕಾರಿ ತಿರುವುಗಳಿಗೆ ಸೂಚನ ಫಲಕ ಅಳವಡಿಸಲು ಸ್ಥಳೀಯರ ಒತ್ತಾಯ

ಮೂಡಿಗೆರೆ: ದೇವರಮನೆ ಸಾಗುವ ಅಪಾಯಕಾರಿ ತಿರುವುಗಳಿಗೆ ಸೂಚನ ಫಲಕ ಅಳವಡಿಸಲು ಸ್ಥಳೀಯರ ಒತ್ತಾಯ

Telegram Group
Join Now

ಮೂಡಿಗೆರೆ: ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗೆ ಸಾಗುವ ಬೆಟ್ಟದ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಸ್ಥಳೀಯರಾದ ರಂಜಿತ್ ಬೈದುವಳ್ಳಿ ಪಬ್ಲಿಕ್ ಇಂಪ್ಯಾಕ್ಟ್‌ ಜೊತೆ ಮಾತನಾಡಿ, ರಸ್ತೆಗೆ ಚಾಚಿದ ಜಾಲಿ ಗಿಡಗಳು ರಸ್ತೆಯಲ್ಲಿ ದಾರಿ ಯುದ್ದಕ್ಕೂ ಬೇರೆ ಬೇರೆ ರೀತಿಯ ಗಿಡಗಳು ಆಳೆತ್ತರದಂತೆ ರಸ್ತೆಯತ್ತ ಚಾಚಿವೆ. ತಿರುವಿನಲ್ಲಿ ರಸ್ತೆಯ ಮುನ್ನೋಟವನ್ನು ಸಂಪೂರ್ಣವಾಗಿ ಇದು ಮರೆಮಾಚುತ್ತಿದೆ. ಕಳೆ ಗಿಡಗಳಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವುದು ಕಷ್ಟವಾಗಿದೆ. ಸೂಚನಾ ಫಲಕಗಳು ಇಲ್ಲದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದು ಕಡೆ ರಸ್ತೆಗಳು ಹದಗೆಟ್ಟಿದ್ದು ಹಳ್ಳ ಕೊಳ್ಳಗಳಿಂದ ಕೂಡಿದೆ ಹೀಗಾಗಿ ರಸ್ತೆಯಲ್ಲಿನ ಸಂಚಾರ ಕಷ್ಟಕರವಾಗಿದೆ ಎಂದು ತಿಳಿಸಿದರು.

ಹಾಗೆ ‘ಗ್ರಾಮೀಣ ರಸ್ತೆ ಇದಾಗಿದ್ದು ಓಡಾಡಲು ಪರದಾಡುವಂತಗಿದ್ದು ತಿರುವು ರಸ್ತೆಗಳು ಪಕ್ಕದಲ್ಲಿ ದೊಡ್ಡ ತಗ್ಗುಗಳು, ಮೋರಿ, ಸೇತುವೆಗಳಿರುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಇದರಿಂದಾಗಿ ಅಪಘಾತದ ಅಪಾಯ ಹೆಚ್ಚು. ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗೆ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸುವ ಕಾರ್ಯವಾಗಬೇಕು ಎಂದರು

‘ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ರಸ್ತೆ ಬದಿಯಲ್ಲಿ ಬೆಳೆದಿರುವ ಕಳೆಗಿಡಗಳನ್ನು ತೆರವುಗೊಳಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಮಾಡಬೇ‌ಕು. ಸೂಚನಾ ಫಲಕಗಳನ್ನು ಅಳವಡಿಸಿದರೆ ಅಪಾಯಗಳಿಗೆ ಕಡಿವಾಣ ಹಾಕಬಹುದು .

ಅಪಾಯಕಾರಿ ತಿರುವುಗಳಲ್ಲಿ ಸವಾರರು ವಾಹನಗಳನ್ನು ರಸ್ತೆಯ ಅರಿವಾಗದೆ ರಸ್ತೆ ಬಿಟ್ಟು ಕಾಡಿಗೆ ಹೋದ ಹಾಗೂ ಅಪಘಾತವಾದ ನಡೆದಿವೆ.ಅನೇಕ ಪ್ರವಾಸಿಗರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸ್ಥಳೀಯರಿಗೆ ತೊಂದರೆ ಮಾಡುತ್ತಿದ್ದು ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ರಸ್ತೆಗಳಲ್ಲಿ ಸಮರ್ಪಕವಾಗಿ ಸೂಚನ ಫಲಕಗಳು ಇಲ್ಲದೆ, ಸವಾರರು ದಿಕ್ಕು ತಪ್ಪುತ್ತಿದ್ದಾರೆ. ಈ ಕೂಡಲೇ ಸಂಬಂಧಿಸಿದ ಇಲಾಖೆಗಳು ಸೂಚನಾ ಫಲಕ ಅಳವಡಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ

ವರದಿ : ಪುನೀತ್ ಕಡಿದಾಳ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments