Monday, November 23, 2026
Homeಜಿಲ್ಲಾಸುದ್ದಿMudigere: ಸಾರ್ವಜನಿಕರ ಹಿತದೃಷ್ಟಿಯಿಂದ BNS ಸಂಹಿತೆ 163 ಹಿಂಪಡೆದ ದಂಡಾಧಿಕಾರಿ ಅಶ್ವಿನಿ!

Mudigere: ಸಾರ್ವಜನಿಕರ ಹಿತದೃಷ್ಟಿಯಿಂದ BNS ಸಂಹಿತೆ 163 ಹಿಂಪಡೆದ ದಂಡಾಧಿಕಾರಿ ಅಶ್ವಿನಿ!

Telegram Group
Join Now

ಮೂಡಿಗೆರೆ:ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ 163 ಹಿಂಪಡೆಯಯಲಾಗಿದೆ ಎಂದು ದಂಡಾಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಿದೆ/

ಸಾರ್ವಜನಿಕರ ಸುರಕ್ಷತೆ ಹಾಗೂ ವನ್ಯ ಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ಆದೇಶ ಸಂಖ್ಯೆ MAG(E)CR 8/2026-27ರಂತೆ ದಿನಾಂಕ 23/11/2026ರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163 ರಲ್ಲಿ ಮಾಡಿದ ಆದೇಶದಲ್ಲಿ ಆನೆಗಳು ಬೀಡು ಬಿಟ್ಟಿರುವ ಗ್ರಾಮಗಳ ಬಗ್ಗೆ ಸ್ಪಷ್ಟ ಮಾಹಿತಿ ಇರದ ಕಾರಣ ಆದೇಶವನ್ನು ಅನುಷ್ಠಾನಗೊಳಿಸಲು ಕಷ್ಟಕರವಾಗಿರುವುದರಿಂದ ಸದರಿ ಆದೇಶವನ್ನು ಹಿಂಪಡೆಯುತ್ತಿರುವುದಾಗಿ ಹಾಗೂ ಅರಣ್ಯ ಇಲಾಖೆಗೆ ನಿರ್ದಿಷ್ಟ ಸ್ಥಳ ಮಾಹಿತಿ ಹಾಗೂ ಯಾವ ದಿನದಿಂದ ಯಾವ ದಿನದವರೆಗೆ ಭಾರತೀಯ ಸುರಕ್ಷಾ ಸಂಹಿತೆ ಜಾರಿಗೊಳಿಸಬೇಕು ಎಂಬುದಾಗಿ ಸ್ಪಷ್ಟ ಮಾಹಿತಿ ನೀಡಬೇಕಾಗಿ ಸೂಚಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದಂಡಾಧಿಕಾರಿ ಶ್ರೀಮತಿ ಅಶ್ವಿನಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!