ಮೂಡಿಗೆರೆ : ಮಾನವೀಯತೆ ಮರೆತ ಕಿಡಿಗೇಡಿಗಳಿಂದ ಅಮಾನವೀಯ ಕೃತ್ಯ ನಡೆದಿದ್ದು ದುಷ್ಕರ್ಮಿಗಳಿಂದ ಬಿಡಾಡಿ ಹಸುಗಳ ಕಾಲು-ಬಾಲ, ತೊಡೆ ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ, ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು .. ರಸ್ತೆಯಲ್ಲಿ ಮಲಗಿದ್ದ ಅಪರೂಪದ ತಳಿ ಮಲೆನಾಡು ಗಿಡ್ಡ ಹಸುಗಳ ಮೇಲೆ ಕಿಡಿಗೇಡಿಗಳಿಂದ ವಿಕೃತಿ ಅಟ್ಟಹಾಸ ಮೆರೆದಿದ್ದು ನಿಲ್ಲಲು, ಓಡಾಡಲು ಆಗದೆ ನೋವಿನಿಂದ ನರಳುತ್ತಿದ್ದು ನಡೆದಾಡಲು ಪರದಾಡ್ತಿರೋ ಹಸುವನ್ನು ಕಂಡು ಸ್ಥಳೀಯರ ಮರುಕ ಪಟ್ಟಿದ್ದಾರೆ.
ಮಲೆನಾಡಲ್ಲಿ ಕಿಡಿಗೇಡಿಗಳಿಂದ ಪದೇ-ಪದೇ ಹಸುಗಳ ಮೇಲೆ ಪೈಶಾಚಿಕ ಕೃತ್ಯ ನಡೆದಿದ್ದು ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ. ದನಗಳ್ಳರು ಕದಿಯಲು ಸುಲಭವಾಗಲಿ ಎಂದು ಕಾಲು ಕತ್ತರಿಸಿರಬಹುದು ಎಂದು ಅನುಮಾನ ಪಟ್ಟಿದ್ದಾರೆ.
ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
