Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು: ಕಾಫಿನಾಡಲ್ಲಿ ಬಿಜೆಪಿ ವತಿಯಿಂದ ಸಂಭ್ರಮಾಚರಣೆ

ಮೂಡಿಗೆರೆ: ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು: ಕಾಫಿನಾಡಲ್ಲಿ ಬಿಜೆಪಿ ವತಿಯಿಂದ ಸಂಭ್ರಮಾಚರಣೆ

ಮೂಡಿಗೆರೆ: ಬಿಹಾರದಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮೂಡಿಗೆರೆ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಲಯನ್ಸ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.

ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ ಈ ಅಭೂತ ಪೂರ್ವ ಗೆಲುವನ್ನು ಬಿಹಾರದ ಜನತೆಗೆ ಅರ್ಪಿಸಿದರು. ಪಕ್ಷ ಸಂಘಟನೆ ಕಾರ್ಯ ವೈಖರಿ ಕಾರ್ಯಕರ್ತರ ಪರಿಶ್ರಮವನ್ನು ಶ್ಲಾಘಿಸಿದರು

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಬಿಹಾರ ಚುನಾವಣೆಯಲ್ಲಿಎನ್‌ಡಿಎ ಮೈತ್ರಿಕೂಟ ಜಯಭೇರಿ ಸಾಧಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದು ಇದು ರಾಷ್ಟ್ರದ ಬಿಜೆಪಿ ಸದಸ್ಯರಿಗೆ ಸಂತೋಷ ತಂದಿದೆ ಎಂದರು.

ಅಲ್ಲಿನ ಕಾರ್ಯಕರ್ತ ಬಳಗ ಬಿಜೆಪಿ ಬಾವುಟ ಹಿಡಿದು ವಿಜಯೋತ್ಸವ ಆಚರಿಸುವುದನ್ನು ನೋಡುವುದೇ ಹೆಮ್ಮೆ ಎಂದರು.

ಬಿಹಾರ ಮತದಾರರಿಗೆ ಜಯಘೋಷ ಕೂಗಿ ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ವಿರುದ್ಧ ಬಿಹಾರದ ಜನತೆ ಉತ್ತರ ನೀಡಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಅರಾಜಕತೆಗೆ ಮುಂದಿನ ದಿನದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದೇವರುಂದ ದಿನೇಶ್, ರಘು ಜನ್ನಾಪುರ, ಕೆ. ಸಿ ರತನ್, ಪರೀಕ್ಷಿತ್ ಜಾವಳಿ, ಪಂಚಾಕ್ಷರಿ, ಪ್ರಶಾಂತ್ ಬಿಳುಗುಳ, ಸಚಿನ್ ಬಾನಳ್ಳಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಾರೇಶ್, ಕಸಬಾ ಹೋಬಳಿ ಅಧ್ಯಕ್ಷ ಸಂದೀಪ್ ಕೆಲ್ಲೂರು, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್, ಶಶಿ ಕೆಲ್ಲೂರು, ರತೀಶ್ ಕೂಡಳ್ಳಿ, ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುನೀಲ್ ಮಣ್ಣಿಕೆರೆ, ಶರತ್, ಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!