Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸತ್ತಿಗನಹಳ್ಳಿ ಗ್ರಾಮದ ನಿನಾದ್ ಗೌಡ ಅಪ್ರತಿಮ ಸಾಧನೆ

ಮೂಡಿಗೆರೆ: ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸತ್ತಿಗನಹಳ್ಳಿ ಗ್ರಾಮದ ನಿನಾದ್ ಗೌಡ ಅಪ್ರತಿಮ ಸಾಧನೆ

ಮೂಡಿಗೆರೆ: ತಾಲೂಕಿನ ಗೋಣಿಬೀಡು ವ್ಯಾಪ್ತಿಯ ಸತ್ತಿಗನಹಳ್ಳಿ ಗ್ರಾಮದ ಹದಿನೇಳು ವರ್ಷದ ನಿನಾದ್ ಗೌಡ ಸೈಬರ್ ಭದ್ರತಾ ವಿಭಾಗದಲ್ಲಿ ಅಪ್ರತಿಮ ಸಾಧನೆ ಗೈದಿದ್ದಾರೆ. ಈ ಕ್ಷೇತ್ರದಲ್ಲಿ ಇವರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ

ಹಲವಾರು ವರ್ಷಗಳಿಂದ ಸಾಧಿಸಬೇಕು ಎಂಬ ಹಂಬಲದೊಂದಿಗೆ ಕಠಿಣ ಪರಿಶ್ರಮದೊಂದಿಗೆ ಅದೆಷ್ಟೋ ನಿದ್ದೆಗಳಿಲ್ಲದ ರಾತ್ರಿ ಕಳೆದ ಯುವಕ ಕೊನೆಗೂ ತಾನು ಅಂದುಕೊಂಡ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಸಾಧಿಸಬೇಕು ಎಂಬ ಛಲ ಹೊಂದಿದ್ದರೆ ಎಲ್ಲವನ್ನು ಗೆಲ್ಲಬಹುದು ಎಂಬುದಕ್ಕೆ ಈ ಯುವಕನ ಸಾಧನೆಯೇ ನಿದರ್ಶನವಾಗಿದೆ.

ಪ್ರೇಮ್ ಕುಮಾರ್ ಹಾಗೂ ಸಂಧ್ಯಾ ಕೃಷಿಕರಾಗಿದ್ದು ತಂದೆ ತಾಯಿಯು ಪರಿಶ್ರಮ ಜೀವಿಗಳಾಗಿದ್ದಾರೆ. ಪೋಷಕರಂತೆ ಮಗ ಸಹ ಪರಿಶ್ರಮದಿಂದ ಯಶಸ್ಸು ಕಂಡಿದ್ದಾನೆ ಎಂಬುದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನಾದ್ ಅವರು ಈ ಯಶಸ್ಸಿನ ಹಿಂದೆ ಹಲವಾರು ಬಾರಿ ವೈಫಲ್ಯದಿಂದ ಬೇಸತ್ತು ಹೋಗಿದ್ದರು ಆದರೆ ಗುರುಗಳ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ, ಸ್ನೇಹಿತರ ಸಹಕಾರ ಇವರನ್ನು ಸಾಧಿಸಬೇಕು ಎಂಬ ಹಠಕ್ಕೆ ಬೀಳುವಂತೆ ಮಾಡಿದೆ.

ನಿನಾದ್ ಅವರು ಸೈಬರ್ ಭದ್ರತಾ ಸಂಶೋಧನೆಯಲ್ಲಿ ನಾಸಾದ ಉಪಡೋಮೆನ್ ನಲ್ಲಿ ಆಡಳಿತಾತ್ಮಕ ಪ್ರವೇಶಕ್ಕೆ ಸಂಬಂಧಿಸದಂತೆ ಭದ್ರತ ಲೋಪ ಗುರುತಿಸಿ ಅದನ್ನು ತಮ್ಮ ಜವಾಬ್ದಾರಿಯುತ ಚಾಣಕ್ಷತನದಿಂದ NASA ಮೂಲಕ ವರದಿ ಮಾಡಿದ್ದೂ ಈ ಅಮೂಲ್ಯವಾದ ಕೊಡುಗೆಯ ಪ್ರತಿಫಲವಾಗಿ ನಾಸಾ ಆಡಳಿತ ಮಂಡಳಿಯು ಅಧಿಕೃತ ಲೆಟರ್ ಆಫ್ ರೆಕಗ್ನೇಷನ್ ಅಪಾರ ಗೌರವದೊಂದಿಗೆ ನೀಡಿ ಗೌರವಿಸಿದ್ದು ಇವರ ನಾಮವನ್ನು ನಾಸಾ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರಿಸಿದೆ.

ಕಂಡ ಕನಸನ್ನು ಕೈ ಚೆಲ್ಲದಂತೆ ಯುವ ಸಮೂಹಕ್ಕೆ ನಿನಾದ್ ಗೌಡ ಸ್ಫೂರ್ತಿಯಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!