Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಆನ್ಲೈನ್ ಗೇಮ್‌ ಹುಚ್ಚು: ಬಿಹಾರಿ ಮೂಲದ ಯುವಕ ನೇಣಿಗೆ ಶರಣು!

ಮೂಡಿಗೆರೆ: ಆನ್ಲೈನ್ ಗೇಮ್‌ ಹುಚ್ಚು: ಬಿಹಾರಿ ಮೂಲದ ಯುವಕ ನೇಣಿಗೆ ಶರಣು!

ಮೂಡಿಗೆರೆ: ಮೊಬೈಲ್ online ಗೇಮ್ಸ್ ಹುಚ್ಚಿಗೆ ಬಿಹಾರಿ ಮೂಲದ ಯುವಕ ನೇಣಿಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಆದರ್ಶ್‌ ನಗರದಲ್ಲಿ ನಡೆದಿದೆ.

ಆದರ್ಶ್ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಿಹಾರಿ ಮೂಲದ ಯುವಕ ಗುಡ್ಡು ಕುಮಾರ್(28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೂಲಿ ಕಾರ್ಮಿಕ ನಾಗಿದ್ದ ಮೊಬೈಲ್ online ಗೇಮ್ಸ್ ಹುಚ್ಚು ಪ್ರಾಣ ಹಾನಿಗೆ ಕಂಠಕವಾಗಿದೆ

ವಿವಾಹಿತ ಬಡ ಕುಟುಂಬದ ಯುವಕ ಗೇಮ್ಸ್ ಹುಚ್ಚಿಗೆ ಬಿದ್ದು ಪತ್ನಿ ಹಾಗೂ ಮೂವರು ಮಕ್ಕಳನ್ನು ಕುಟುಂಬವನ್ನು ಬೀದಿ ಪಾಲು ಮಾಡಿದ್ದೂ, ಕಷ್ಟ ಪಟ್ಟು ದುಡಿದ ಹಣವನ್ನು ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಆಟವಾಡಿ ಹಣ ಕಳೆದುಕೊಂಡ ಹಿನ್ನಲೆ ಬೇಸುತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಮೂಡಿಗೆರೆಯ ಬೀಜುವಳ್ಳಿ ಚಿತಗಾರದಲ್ಲಿ
ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ವತಿಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೊನು ಅಬ್ದುಲ್ ರಹಿಮಾನ್, ಹರ್ಷದ್ ಕಮಲ್, ಮೂಡಿಗೆರೆಯ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!