ಮೂಡಿಗೆರೆ : ನೂತನ ತಾಲೂಕು ಲೇಖಕಿಯರ ಸಂಘಟನೆ ಇಂದು ಪಟ್ಟಣದ ಜೆ ಸಿ ಹಾಲ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ತಾಲೂಕು ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷೆಯಾಗಿ ಶ್ರೀಮತಿ ಪ್ರೇಮ ಪುಣ್ಯಮೂರ್ತಿ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಸುಚಿತ್ರ ಪ್ರಸನ್ನ ಅವರನ್ನು ಕರ್ನಾಟಕ ಲೇಖಕಿಯರ ಸಂಘ ಚಿಕ್ಕಮಗಳೂರು ಘಟಕದ ಅಧ್ಯಕ್ಷೆ ಶ್ರುತಿ ಅಜ್ಜಂಪುರ ಘೋಷಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿ ದಿಕ್ಸೂಚಿ ಭಾಷಣ ಮಾಡಿದ ಖ್ಯಾತ ಅಂಕಣಕಾರ ಹಾಗೂ ಕಾದಂಬರಿಕಾರರಾದ ಅರ್ಜುನ್ ದೇವಾಲದಕೆರೆ ಮಾತನಾಡಿ ಸಾಹಿತಿಗಳು ಜನಸಾಮಾನ್ಯರೊಂದಿಗೆ ಬೆರೆತು ಬರೆದರೆ ಬರವಣಿಗೆಗೆ ಸಾರ್ಥಕತೆ ಎಂಬುದಾಗಿ ತಿಳಿಸಿದರು. ಪುಸ್ತಕ ಸಂತೆ ಕಾರ್ಯಕ್ರಮ ಹೆಚ್ಚಾಗಬೇಕು.. ಯುವ ಬರಹಗಾರರು ಕಾರ್ಯಾಗಾರ ಗಳಲ್ಲಿ ಭಾಗಿಯಾಗಿ ಬರವಣಿಗೆ ಶೈಲಿ ಕಲಿಯಬೇಕು ಎಂದರು ವಿಚಾರಗಳನ್ನು ಚೀಟಿಗಳಲ್ಲಿ ಬರೆದಿಟ್ಟು ಅದನ್ನು ಮುಂದಿಟ್ಟುಕೊಂಡು ಭಾಷಣ ಮಾಡುವುದು ಇಲ್ಲಿಗೆ ಕೊನೆಯಾಗಲಿ. ನಮ್ಮ ಬುದ್ಧಿ ಶಕ್ತಿ ಅನುಭವ ಓದಿ ತಿಳಿದುಕೊಂಡು ಸಮಾಜಕ್ಕೆ ತಿಳಿಸಿಕೊಡೋಣ ಎಂದರು
ಸಾಹಿತ್ಯ ಯಾರಿಗೂ ಸೀಮಿತವಲ್ಲ ಇದಕ್ಕೆ ಸಾಕ್ಷಿಎಂಬಂತೆ ಅನಕ್ಷರಸ್ತರು ಹಾಡಿದ ಮದುವೆ ಹಾಡಿನ ಸಾಲುಗಳು ಇಂದಿಗೂ ಜೀವಂತವಾಗಿರುವದನ್ನು ನಾವು ಕಾಣಬಹುದು. ಹೆಸರಾಗುವ ಮುನ್ನ ಆನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನನಗೆ ನನ್ನ ಬರವಣಿಗೆಗೆ ಬಹಳಷ್ಟು ಪ್ರೋತ್ಸಾಹ ನೀಡಿದ್ದು ನನ್ನ ಪಾಲಿನ ಮೂಡಿಗೆರೆ ಪುಣ್ಯ ಭೂಮಿ ಎಂದರು
ಮೂಡಿಗೆರೆ ಸಾಹಿತ್ಯದ ಪುಣ್ಯಭೂಮಿ ಸಾಹಿತ್ಯ ಹಿನ್ನಲೆ ಇರುವ ಕಾರಣದಿಂದಾಗಿ ತೇಜಸ್ವಿ ಅಂತಹ ಮಹನೀಯರು ನೆಲೆಸಿದ್ದರು ಅವರ ಆದರ್ಶಮಯ ಬದುಕನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು
ಬರವಣಿಗೆಯಲ್ಲಿ ತಪ್ಪು ಒಪ್ಪುಗಳು ಸಹಜ ಬರಹಗಾರರಾಗಲು ಪರಿಶ್ರಮ ಇರಬೇಕು ಯುವ ಲೇಖಕರು ಹೆಚ್ಚಿನ ಪುಸ್ತಕಗಳನ್ನು ಓದುವಂತೆ ಕಿವಿ ಮಾತು ಹೇಳಿದರು
ಇದೆ ಸಂಧರ್ಭದಲ್ಲಿ ಲೇಖಕಿ ಪ್ರೇಮ ಪುಣ್ಯಮೂರ್ತಿ ಬರೆದ ಮನದ ಮಾತು ಎಂಬ ಪುಸ್ತಕವನ್ನು ಭಾರತಿ ಅವರು ಬಿಡುಗಡೆ ಮಾಡಿದರು. ಹಾಗೆ ಅನೇಕ ಗಣ್ಯರನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮೂಡಿಗೆರೆ ತಾಲ್ಲೂಕು ಲೇಖಕಿಯರ ಸಂಘದ ವಿವಿಧ ಜವಾಬ್ದಾರಿ ಕಾರ್ಯದರ್ಶಿಗಳಾಗಿ ಶಕುಂತಲಾ ಪಾಟೀಲ್ ಇಂಪಾ ಸವೀನ್, ಕೋಶಧ್ಯಕ್ಷೆ ರಮ್ಯಾಶ್ರೀ ಹಿರೇಶಿಗೀರ, ಪ್ರಧಾನ ಸಂಚಾಲಕಿ ಚಿತ್ರ ಸುದೀಪ್, ಸಂಚಾಲಕಿ ಕವಿತ ಸಂತೋಷ್, ಸಂಘಟನಾ ಕಾರ್ಯದರ್ಶಿಗಳಾಗಿ ರಶ್ಮಿ, ಜ್ಯೋತಿ, ಸೇರಿದಂತೆ ಅನೇಕರು ಜವಾಬ್ದಾರಿ ಸ್ವೀಕರಿಸಿದರು
ಈ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್ ಉದ್ಘಾಟಿಸಿ ನೂತನ ಲೇಖಕಿಯರ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಲೇಖಕಿಯರ ಪದಗ್ರಹಣ ಕಾರ್ಯಕ್ರಮದಲ್ಲಿ ದರ್ಪಣ ಪತ್ರಿಕೆ ಸಂಪಾದಕ ಪ್ರಸನ್ನ ಗೌಡಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕ ಶಾಂತ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮಂಚೇಗೌಡ, ಕನ್ನಡ ಪರಿಷತ್ತಿನ ಸಂಯೋಜಕ ನಾಗರಾಜ್, ಯುವ ಘಟಕದ ಅಧ್ಯಕ್ಷ ಚಂದ್ರು ಒಡೆಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ: ಪುನೀತ್ ಕಡಿದಾಳು
9483811948
