Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಸಾರ್ವಜನಿಕರೇಎಚ್ಚರ, ತೂಕದಲ್ಲಿ ಬಾರಿ ಮೋಸ: ತೂಕದ ಬೊಟ್ಟಿಗಿಲ್ಲ ಸೀಲ್ ಅಧಿಕಾರಿಗಳು ಶಾಮಿಲಾಗಿರುವ ಶಂಕೆ

ಮೂಡಿಗೆರೆ: ಸಾರ್ವಜನಿಕರೇಎಚ್ಚರ, ತೂಕದಲ್ಲಿ ಬಾರಿ ಮೋಸ: ತೂಕದ ಬೊಟ್ಟಿಗಿಲ್ಲ ಸೀಲ್ ಅಧಿಕಾರಿಗಳು ಶಾಮಿಲಾಗಿರುವ ಶಂಕೆ

ಮೂಡಿಗೆರೆ: ಪಟ್ಟಣದಲ್ಲಿ ನಡೆಯುವ ಶುಕ್ರವಾರ ಸಂತೆ ಈಗ ವಿವಾದದ ಗೂಡಾಗಿ ಪರಿಣಮಿಸಿದೆ.

ಹೌದು ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಎಂದು ವಾರಗಟ್ಟಲೆ ತೋಟಗಳಲ್ಲಿ ಕೂಲಿ ಮಾಡಿ ಒಂದಿಷ್ಟು ಹಣ ಉಳಿಸಿ ಜೀವನ ನಡೆಸಲು ನಿಜವಾಗಿ ಸಂತೆಯ ಲಾಭ ಪಡೆಯುವ ಗ್ರಾಹಕರೆಂದರೆ ಮಧ್ಯಮ ವರ್ಗದ ಜನರು ಹಾಗೂ ಕೂಲಿ ಕಾರ್ಮಿಕರು.

ಆದರೆ ಇಲ್ಲಿ ತೂಕದ ಮೋಸದ ಬಗ್ಗೆ ಪ್ರಶ್ನೆ ಮಾಡಬೇಕಾದ ಅಧಿಕಾರಿಗಳು ಮೂಕರಾಗಿರೋದು ನೋಡಿದರೆ ಇವರು ಕೂಡ ಶಾಮೀಲಾಗಿರುವ ಎಲ್ಲ ಸಂಶಯಗಳು ಮಾಡೋದು ಸಹಜವೇ ಆಗಿದೆ

ಇಲ್ಲಿ ತೂಕಕ್ಕೆ ಬಳಸುವ ತೂಕದ ತಕ್ಕಡಿಗಳು ಮಾತ್ತ್ರ ತುಕ್ಕು ಹಿಡಿದು ಇವರ ತಾಳಕ್ಕೆ ತಕ್ಕಂತೆ ತೂಗುವ ಪರಿಸ್ಥಿತಿಗೆ ಬಂದು ತಲುಪಿವೆ ಆದರೆ ತೂಕದ ಬೊಟ್ಟಿಗೆ ಇರಬೇಕಾದ ಮಾಪನ ಇಲಾಖೆಯ ಮೊಹರು ಕೂಡ ಹಾಕಿಸದೆ ಎಷ್ಟೋ ವರ್ಷಗಳು ಕಳೆದು ಹೋದಂತೆ ಕಾಣುತ್ತದೆ.

ಆದರೆ ಸುಂಕದ ಗೋಜಿಗೆ ಹೋಗುದ ಪಟ್ಟಣ ಪಂಚಾಯ್ತಿ ಇದರ ಗೋಜಿಗೆ ಹೋದ ಹಾಗೆ ಕಾಣಿಸುತ್ತಿದೆ ಪ್ರಪಂಚವೇ ಡಿಜಿಟಲ್ ಯುಗದಲ್ಲಿ ಇರುವಾಗ ಇವರುಗಳು ಇನ್ನೂ ಹಳೆಯ ಜಮಾನದಲ್ಲಿ ಇದ್ದು ಗ್ರಾಹಕರಿಗೆ ಮೋಸ ಮಾಡಿಕೊಂಡು ನಾವೇ ಮಾಡಿದ್ದೂ ಸರಿ ಎನ್ನುವ ಮೊಂಡು ತನ ಕಾಣೋದು ಮಾತ್ರ ಬೇಸರದ ಸಂಗತಿ

ಮೂಡಿಗೆರೆಯ ಜನರಿಗೆ ಮಾತ್ರ ಪಟ್ಟಣ ಪಂಚಾಯ್ತಿ ಮಾತ್ರ ಇದರ ಬಗ್ಗೆ ಮೌನ ವಹಿಸಿದೆ ಇನ್ನಾದರೂ ಇದರ ಬಗ್ಗೆ ಗಮನ ಹರಿಸಿ ಜನರಿಗೆ ನ್ಯಾಯ ದೊರಕಿಸುತ್ತದೆಯಾ ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!