Saturday, August 15, 2026
Homeಕ್ರೈಮ್ಮೂಡಿಗೆರೆ: ಅಪಾಯಕ್ಕೆ ಎಡೆ ಮಾಡಿದೆ ಕಡೂರು- ಮಂಗಳೂರು ರಸ್ತೆ: ಪೃಥ್ವಿ ಅವರೆಕಾಡು

ಮೂಡಿಗೆರೆ: ಅಪಾಯಕ್ಕೆ ಎಡೆ ಮಾಡಿದೆ ಕಡೂರು- ಮಂಗಳೂರು ರಸ್ತೆ: ಪೃಥ್ವಿ ಅವರೆಕಾಡು

Telegram Group
Join Now

ಮೂಡಿಗೆರೆ: ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಬ್ಬೆನಹಳ್ಳಿಯಲ್ಲಿ ರಸ್ತೆ ಹಾಳಾಗಿದ್ದು ಅಪಾಯಕ್ಕೆ ಎಡೆ ಮಾಡಿದೆ ಎಂದು ಪೃಥ್ವಿ ಅವರೇಕಾಡು ಅವರು ತಿಳಿಸಿದ್ದಾರೆ

ಈ ರಸ್ತೆ ಮಾಡಿದ ಸ್ವಲ್ಪ ದಿನಕ್ಕೆ ರಸ್ತೆ ಹಾಳಾಗಿದ್ದು ತುಂಬಾ ತಿರುವುಗಳು ಇರುವ ಕಡೆ, ಹೆಚ್ಚು ಗುಂಡಿಗಳು ಬಿದ್ದಿರುವುದು ಪ್ರತಿ ದಿನ ತಿರುಗುವ ಸ್ಥಳೀಯ ಶಾಸಕಿ ಕಣ್ಣಿಗೆ ಬೀಳುತ್ತೀಲ್ಲವೇ ಎಂದು ಪ್ರಶ್ನಿಸಿದರು.

ಗುಂಡಿ ಬಿದ್ದ ಜಾಗವನ್ನು ಸಂಪೂರ್ಣವಾಗಿ ಸರಿಪಡಿಸುವ ಕೆಲಸ ಆಗಬೇಕು ರಸ್ತೆ ವಿಶಾಲವಾಗಿದೆ ಆದರೆ ತಿರುವಿನ ಜಾಗದಲ್ಲಿ ಸಂಪೂರ್ಣ ಹಾಳಾಗಿದೆ ಎಂದರು.

ರಸ್ತೆ ನಿರ್ವಹಣೆಗೆ ಗುತ್ತಿಗೆದಾರನಿಗೆ 5 ವರ್ಷ ನಿರ್ವಹಣೆ ಜವಾಬ್ದಾರಿ ಇರುತ್ತದೆ, ಕೆಲ ಭಾಗಗಳಲ್ಲಿ ಹಾಳಾಗಿರುವ ಜಾಗವನ್ನು ಕಿತ್ತು ಸರಿಪಡಿಸಬೇಕಿದೆ, ಇಲ್ಲದಿದ್ದರೆ ನಿರಂತರವಾಗಿ ಸಮಸ್ಯೆ ಉಂಟಾಗಿ ಅಪಘಾತ ಆಗುವುದು ಕಟ್ಟಿಟ್ಟ ಬುತ್ತಿ ಎಂದರು.

ವೇಗವಾಗಿ ಸಾಗುವ ವಾಹನಗಳಿಗೆ ರಸ್ತೆಯಲ್ಲಿ ಈ ರೀತಿ ಧಿಡೀರ್ ಗುಂಡಿಗಳಿಂದ ಚಾಲಕರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುತ್ತದೆ ಎಂದರು


ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಗಳಿಗೆ ಈ ಸಮಸ್ಯೆ ಕಂಡಿಲ್ಲವೇ, ಈಗಲಾದರೂ ಎಚ್ಚೆತ್ತುಕೊಂಡು
ಮೂಡಿಗೆರೆ ಶಾಸಕರು ಹಾಗೂ ಅಧಿಕಾರಿಗಳು ಗಮನ ಹರಿಸಿ ಅಪಾಯ ಆಗುವ ಮುಂಚೆ ರಸ್ತೆ ದುರಸ್ತಿ ಗೊಳಿಸುವಂತೆ ಆಗ್ರಹಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments