ಚಿಕ್ಕಮಗಳೂರು: ಕರೆಂಟ್ ಕೈಕೊಟ್ಟರೆ ಕತ್ತಲಲ್ಲಿ ಮುಳುಗಿದ ಕಾಫಿನಾಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ. ಕಳೆದ 6 ತಿಂಗಳಿಂದ ಕೆಟ್ಟು ಹೋಗಿರೋ ಜನರೇಟರ್ ದುರಸ್ತಿ ಮಾಡಿಸದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು .. ಚಿಕ್ಕಮಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ವಿದ್ಯುತ್ ಇಲ್ಲದೆ ಪ್ರಯಾಣಿಕರ ಪರದಾಟ ಅನುಭವಿಸಿದ್ದು ಟಿಸಿ ಜಾಗದಲ್ಲೇ ಕಗ್ಗತ್ತಲು, ಮೊಬೈಲ್ ಲೈಟ್ ನಿಂದ ಎಂಟ್ರಿ ಮಾಡುವ ಸ್ಥಿತಿ ಉಂಟಾಗಿದೆ. ಹಾಗೆ ಮೊಬೈಲ್ ಟಾರ್ಚ್ ನಿಂದ ವ್ಯವಹರಿಸುತ್ತಿರೋ ಬಸ್ ಸ್ಡ್ಯಾಂಡ್ ಅಂಗಡಿಗಳ ಬಸ್ ಹತ್ತಲು, ಇಳಿಯಲು ಕತ್ತಲೆಯಲ್ಲಿ ಪ್ರಯಾಣಿಕರ ಹರಸಾಹಸ ಪಡುವಂತಾಗಿದೆ.
ಕಳ್ಳ-ಕಾಕರಿಗೆ ವರದಾನವಾಗಿರೋ ಕರೆಂಟ್ ಇಲ್ಲದ ಬಸ್ ನಿಲ್ದಾಣ ನಿತ್ಯ ಸಾವಿರಾರು ಜನ ಓಡಾಡೋ ಜಾಗ, ಕತ್ತಲು ಕಳ್ಳರ ಕೈಚಳಕಕ್ಕೂ ಸಲೀಸು ಬೇರೆ ಬಸ್ ಬಂದ ಕೂಡಲೇ ಅದರ ಲೈಟ್ ಬೆಳಕಿನಲ್ಲಿ ಜನರ ಅಲರ್ಟ್ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಿಗೆ ತೆರಳುವ ಪ್ರವಾಸಿಗರಿಗೂ ಕತ್ತಲೆ ಕಾಟ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕೆಎಸ್ಆರ್ಟಿಸಿ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ಶೋಚನಿಯ ಎಂದರೆ ತಪ್ಪಾಗಲಾರದು.
